ಓಟ್ಸ್ನಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಅದಕ್ಕಾಗಿಯೇ ಹೆಚ್ಚಿನ ಜನರು ಬೆಳಗಿನ ಉಪಾಹಾರಕ್ಕೆ ಓಟ್ಸ್ ಸೇವಿಸುತ್ತಾರೆ. ಪ್ರತಿಯೊಬ್ಬರೂ ಇದನ್ನು ಸೇವನೆ ಮಾಡಬಹುದು. ನೀವೇನಾದ್ರೂ ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ ಓಟ್ಸ್ ನಿಮಗೆ ಉತ್ತಮ ಆಹಾರ.
ಆದರೆ ಸುವಾಸನೆಯುಕ್ತ, ರೆಡಿ ಟು ಈಟ್ ಓಟ್ಸ್ ಅನ್ನು ತಿನ್ನಬೇಡಿ. ಅವುಗಳು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ. ಹಾಗಾಗಿ ಸಾದಾ ಓಟ್ಸ್ ಅನ್ನು ಮಾತ್ರ ತಿನ್ನಬೇಕು.
ತೂಕ ಇಳಿಸಿಕೊಳ್ಳಲು ಬೆಳಗಿನ ಉಪಹಾರ ಹಾಗೂ ಸಂಜೆ ಸ್ನಾಕ್ಸ್‌ಗೆ ಓಟ್ಸ್ ತಿನ್ನಿ. ಓಟ್ಸ್ ತಿಂದರೆ ರಾತ್ರಿ ಹೆಚ್ಚು ಹಸಿವಾಗುವುದಿಲ್ಲ. ಪರಿಣಾಮ ನೀವು ಹೆಚ್ಹೆಚ್ಚು ಆಹಾರ ಸೇವಿಸುವುದನ್ನು ತಪ್ಪಿಸಬಹುದು. ಆಗ ತೂಕ ತಂತಾನೇ ಇಳಿಯಲಾರಂಭಿಸುತ್ತದೆ.
ಬೆಳಗ್ಗೆ ತಿಂಡಿಗೆ ಓಟ್ಸ್ ಜೊತೆಗೆ ಡ್ರೈಫ್ರೂಟ್ಸ್ ಬೆರೆಸಿ ತಿನ್ನಬಹುದು. ಸಂಜೆ ಸ್ನಾಕ್ಸ್‌ಗೂ ಇದು ಉತ್ತಮ ಆಯ್ಕೆ. ತೂಕ ಇಳಿಸಲು ನೀವು ಸಕ್ಕರೆ ಸೇವನೆಯನ್ನು ನಿಲ್ಲಿಸಬೇಕು. ನೈಸರ್ಗಿಕ ಸಿಹಿಯನ್ನು ಸೇವನೆ ಮಾಡಲು ಯಾವುದೇ ಅಡ್ಡಿಯಿಲ್ಲ. ಸಿಹಿ ಓಟ್ಸ್ ತಿನ್ನುವ ಇಚ್ಛೆ ನಿಮಗಿದ್ದರೆ ಸಕ್ಕರೆ ಬದಲು ರಾಸ್‌ಬೆರ್ರಿ ಹಣ್ಣುಗಳು, ಸ್ಟ್ರಾಬೆರ್ರಿಗಳನ್ನು ಸೇರಿಸಿಕೊಳ್ಳಿ.
ಸಾಮಾನ್ಯವಾಗಿ ಹೆಚ್ಚಿನ ಜನರು ಹಾಲು ಮತ್ತು ಓಟ್ಸ್ ಅನ್ನು ಒಟ್ಟಿಗೆ ಸೇರಿಸಿ ತಿನ್ನಲು ಇಷ್ಟಪಡುತ್ತಾರೆ. ಆದರೆ ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಹಾಲಿನ ಬದಲಿಗೆ ನೀರನ್ನು ಬಳಸಬಹುದು. ಓಟ್ಸ್ನಲ್ಲಿ ಕ್ಯಾಲೋರಿ ಕಡಿಮೆ ಇರುವುದರಿಂದ ತೂಕ ಇಳಿಸಲು ಇದು ಸಹಾಯ ಮಾಡುತ್ತದೆ.
ಓಟ್ಸ್ನಲ್ಲಿ ನೈಸರ್ಗಿಕವಾಗಿ ಕರಗುವ ಫೈಬರ್ ಅಂಶವಿದೆ. ಇದು ಹಸಿವಿನ ವಿರುದ್ಧ ಹೋರಾಡಬಲ್ಲ ಹಾರ್ಮೋನ್, ಕೊಲೆಸಿಸ್ಟೋನಿನ್ ಅನ್ನು ಹೆಚ್ಚಿಸುತ್ತದೆ. ಪರಿಣಾಮ ಹಸಿವನ್ನು ಇದು ಕಡಿಮೆ ಮಾಡುತ್ತದೆ ಮತ್ತು ತೂಕವನ್ನು ನಿಯಂತ್ರಣದಲ್ಲಿಡುತ್ತದೆ.