ಒಣಕೆಮ್ಮುವಿನಲ್ಲಿ ಕಫದ ಲೋಳೆ ಉತ್ಪತ್ತಿ ಆಗುವುದಿಲ್ಲ. ರಾತ್ರಿ ವೇಳೆ ಬಿಡದೆ ಕಾಡುವ ಈ ಕೆಮ್ಮಿಗೆ ಮನೆಮದ್ದುಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು.
ಅರ್ಧ ಚಮಚ ಜೇಷ್ಠಮಧು, ಒಂದು ಚಮಚ ಜೇನುತುಪ್ಪ ಮತ್ತು ಹತ್ತು ತುಳಸಿ ಎಲೆಗಳನ್ನು ರುಬ್ಬಿ, ಇದನ್ನು ದಿನಕ್ಕೆ ಮೂರು ಬಾರಿ ಊಟ ಮಾಡಿದ ನಂತರ ಅರ್ಧ ಗಂಟೆ ಬಿಟ್ಟು ಸೇವಿಸಬೇಕು. ಹೀಗೆ ಮಾಡುವುದರಿಂದ ಒಣಕೆಮ್ಮು ಸುಲಭವಾಗಿ ನಿವಾರಣೆಯಾಗುತ್ತದೆ.
ಎರಡು ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ, ಅರ್ಧ ಚಮಚ ಕಲ್ಲು ಸಕ್ಕರೆ ಮತ್ತು ಅರ್ಧ ಚಮಚ ಜೇನುತುಪ್ಪ ಬೆರೆಸಿ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸೇವಿಸಬೇಕು. ಹೀಗೆ ಮಾಡುವುದರಿಂದ ಒಣಕೆಮ್ಮಿಗೆ ಉತ್ತಮವಾದ ಫಲಿತಾಂಶ ದೊರೆಯುತ್ತದೆ.
ಒಣಕೆಮ್ಮಿಗೆ ಲವಂಗವೂ ಮದ್ದಾಗಬಲ್ಲದು. ಲವಂಗವನ್ನು ಚೆನ್ನಾಗಿ ಹುರಿದು ಜೊತೆಗೆ ತುಳಸಿ ಎಲೆಯನ್ನು ಸೇರಿಸಿ ಹಾಗೆಯೇ ಜಗಿದು ತಿನ್ನಬೇಕು.