ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ; 6 ಮಂದಿ ದುರ್ಮರಣ 14-04-2022 8:48AM IST / No Comments / Posted In: Latest News, India, Live News ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಅಕ್ಕಿರೆಡ್ಡಿಗೂಡೆಂನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 6 ಮಂದಿ ಸಾವನ್ನಪ್ಪಿ 12 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಕಳೆದ ರಾತ್ರಿ ನೈಟ್ರಿಕ್ ಆಸಿಡ್ ಸೋರಿಕೆಯಿಂದ ಈ ಅವಘಡ ಸಂಭವಿಸಿದೆ ಎಂದು ಜಿಲ್ಲಾ ಎಸ್.ಪಿ. ರಾಹುಲ್ ದೇವ್ ಶರ್ಮಾ ತಿಳಿಸಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. Andhra Pradesh | Six killed & 12 injured in a fire accident at a chemical factory in Akkireddigudem, Eluru, last night. The fire broke out due to leakage of nitric acid, monomethyl: Eluru SP Rahul Dev Sharma (Visuals from last night) pic.twitter.com/sRwkTRrLQs — ANI (@ANI) April 14, 2022