
ಕೆಲವೇ ದಿನಗಳಲ್ಲಿ ಮುಖದ ಮೇಲಿನ ರಂಧ್ರಗಳನ್ನು ಹೋಗಲಾಡಿಸಲು ಇಲ್ಲಿದೆ ಒಂದಿಷ್ಟು ಟಿಪ್ಸ್.
ಅರ್ಧ ಸೌತೆಕಾಯಿ ಕತ್ತರಿಸಿ ರುಬ್ಬಿ ಪೇಸ್ಟ್ ತಯಾರಿಸಿ. ಅದಕ್ಕೆ ಒಂದು ಚಮಚ ನಿಂಬೆರಸ ಅಥವಾ ಟೊಮೆಟೊ ರಸವನ್ನು ಹಾಕಿ. ಒಂದು ಚಮಚ ಜೇನುತುಪ್ಪ, ಅರ್ಧ ಚಮಚ ಅಲೋವೆರಾ ಹಾಕಿ ಮಿಶ್ರಣ ಮಾಡಿಕೊಳ್ಳಿ.
ಮೊದಲು ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ನಂತರ ಹಚ್ಚಿದರೆ ಮುಖದ ಮೇಲಿರುವ ಮೊಡವೆ ಕಲೆಗಳು ದೂರವಾಗುತ್ತದೆ. ಹಾಗೆಯೇ ಮುಖದ ಮೇಲಿನ ರಂಧ್ರಗಳು ದೂರವಾಗುತ್ತವೆ.
ಅಲೋವೇರಾದಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಹೆಚ್ಚಾಗಿ ಇರುವುದರಿಂದ ಮೊಡವೆಗಳನ್ನು ಹೋಗಲಾಡಿಸಿ ರಂಧ್ರಗಳನ್ನು ಮುಚ್ಚುತ್ತದೆ. ಅದರೊಂದಿಗೆ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.
ಮುಖಕ್ಕೆ ಹಚ್ಚಿ ಒಣಗಿದ ಬಳಿಕ ತಣ್ಣೀರಿನಿಂದ ತೊಳೆಯಿರಿ. ಬಳಿಕ ಐಸ್ ಕ್ಯೂಬ್ ನಿಂದ ಮಸಾಜ್ ಮಾಡಿ. ಹೀಗೆ ದಿನಕ್ಕೆರಡು ಬಾರಿ ಮಾಡಬಹುದು.