alex Certify ಕೆನಡಾದಲ್ಲಿ ಹೆಚ್ಚುತ್ತಿರುವ ಒಮಿಕ್ರಾನ್, ಕೊರೋನಾ ಸೋಂಕಿನ ನಡುವೆಯೂ ಆರೋಗ್ಯ ಸಿಬ್ಬಂದಿಗಳು ಕೆಲಸಕ್ಕೆ ಹಾಜರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆನಡಾದಲ್ಲಿ ಹೆಚ್ಚುತ್ತಿರುವ ಒಮಿಕ್ರಾನ್, ಕೊರೋನಾ ಸೋಂಕಿನ ನಡುವೆಯೂ ಆರೋಗ್ಯ ಸಿಬ್ಬಂದಿಗಳು ಕೆಲಸಕ್ಕೆ ಹಾಜರ್

ಕೆನಡಾದ ಕ್ವಿಬೆಕ್ ಭಾಗದಲ್ಲಿ ಕೊರೋನಾ‌ ಹಾಗೂ ಒಮಿಕ್ರಾನ್ ಉಲ್ಬಣವಾಗುತ್ತಿರುವುದರಿಂದ ಕೋವಿಡ್ ಪಾಸಿಟಿವ್ ಬಂದ ಆರೋಗ್ಯ ಸಿಬ್ಬಂದಿಗಳು ಸಹ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಬಗ್ಗೆ ಮಾತನಾಡಿರುವ ಕ್ವಿಬೆಕ್‌ನ ಆರೋಗ್ಯ ಸಚಿವ ಕ್ರಿಶ್ಚಿಯನ್ ಡ್ಯೂಬ್ ಅವರು ಇದರ ಹೊರತಾಗಿ ಬೇರೆ ಆಯ್ಕೆಯಿಲ್ಲ ಎಂದಿದ್ದಾರೆ.‌

ಕೆನಡಾದ ಕ್ವಿಬೆಕ್ ಪ್ರಾಂತ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೊಸ ಅಲೆಯ ಮುನ್ಸೂಚನೆ ನೀಡಿದೆ. ಮಂಗಳವಾರ ಈ ಪ್ರಾಂತ್ಯದಲ್ಲಿ 12,833 ಹೊಸ ಕೊರೋನ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಸ್ಕ್ರೀನಿಂಗ್ ಸೆಂಟರ್‌ಗಳು ತುಂಬಿ ತುಳುಕುತ್ತಿರುವ ಕಾರಣ, ಮನೆಯಲ್ಲೆ ಕ್ಷಿಪ್ರ ಪರೀಕ್ಷಾ ಕಿಟ್‌ಗಳನ್ನು ಬಳಸುತ್ತಿದ್ದಾರೆ, ಹೀಗಾಗಿ ಕೆಲವು ಪ್ರಕರಣಗಳು ವರದಿಯಾಗುತ್ತಿಲ್ಲ ಎಂದು ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ.

‘ಕಾಂಗ್ರೆಸ್​​ಗೆ ಗರ್ಭಪಾತ ಆಗಿದೆ; ಗಂಡೋ – ಹೆಣ್ಣೋ ಗೊತ್ತಿಲ್ಲ’ – ಶಾಸಕ ಎಂಪಿ ರೇಣುಕಾಚಾರ್ಯ ವ್ಯಂಗ್ಯ

ಒಮಿಕ್ರಾನ್ ಸೋಂಕು ವೇಗವಾಗಿ ಹರಡುತ್ತಿದೆ‌. ಅದರ ಪರಿಣಾಮ‌ ತುಂಬಾ ಆಘಾತಕಾರಿಯಾಗಿದೆ, ಮುಂದೆ ಪರಿಸ್ಥಿತಿ ಉಲ್ಭಣಿಸುವುದು ಖಚಿತ. ಹಾಗಾಗಿ ಮುಂದಿನ‌ ದಿನಗಳಲ್ಲಿ ನಮ್ಮ ಪ್ರಾಂತ್ಯದವರಿಗೆ ಚಿಕಿತ್ಸೆ ನೀಡಲು ಕೊರೋನಾ‌ ಪಾಸಿಟಿವ್ ಇದ್ದರೂ ಆರೋಗ್ಯ ಸಿಬ್ಬಂದಿಗಳು ಕೆಲಸ ನಿರ್ವಹಿಸಬೇಕು. ಒಂದು ನಿರ್ದಿಷ್ಟ ಸ್ಥಿತಿಯ ಅಡಿಯಲ್ಲಿ, ಆದ್ಯತೆ ಮತ್ತು ಅಪಾಯ ನಿರ್ವಹಣೆಯ ಪಟ್ಟಿಯ ಪ್ರಕಾರ ಕೆಲಸ ಮಾಡಲು ತಯಾರಾಗಬೇಕಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಒದಗಿಸಲಾಗುವುದು. ಜೊತೆಗೆ ಜನವರಿ 4 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ -19 ಲಸಿಕೆಯ ಮೂರನೇ ಡೋಸ್ ನೀಡಲು ತೀರ್ಮಾನಿಸಲಾಗಿದೆ ಎಂದು ಡ್ಯೂಬ್ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Čísla a číslovky: co by měl Tajný trik vaření míchaných vajec: co odborníci prozradili Test detektivních schopností: v jarní logické hře Nejlepší test pozornosti: musíte najít ptáka