ಪ್ರತಿಯೊಬ್ಬರಿಗೂ ಕನಸು ಬೀಳೋದು ಸಾಮಾನ್ಯ ವಿಚಾರ. ಕೆಲವರಿಗೆ ಕೆಟ್ಟ ಕನಸು ಬಿದ್ರೆ ಮತ್ತೆ ಕೆಲವರಿಗೆ ಒಳ್ಳೆ ಕನಸು ಬೀಳುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನಸಿಗೆ ಕಾರಣ ಗ್ರಹ. ಜಾತಕದಲ್ಲಿ ಗ್ರಹ ದೋಷ ಕಂಡು ಬಂದಲ್ಲಿ ಕೆಟ್ಟ ಕನಸು ಬೀಳುತ್ತದೆ. ಸಾಮಾನ್ಯವಾಗಿ ಸೂರ್ಯ ಗ್ರಹ ಕೆಟ್ಟ ಸ್ಥಾನದಲ್ಲಿದ್ದರೆ ಕೆಟ್ಟ ಕನಸು ಬೀಳುತ್ತದೆ.
ಸೂರ್ಯ ಕೆಟ್ಟ ಸ್ಥಾನದಲ್ಲಿದ್ದರೆ ಚಿತ್ರ-ವಿಚಿತ್ರ ಕನಸುಗಳು ಬೀಳುತ್ತವೆ. ಜಾತಕದಲ್ಲಿ ಸೂರ್ಯ ಗ್ರಹವನ್ನು ಬಲಪಡಿಸಲು ಏನು ಮಾಡಬೇಕು ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಸೂರ್ಯನಿಗೆ ಪ್ರತಿ ದಿನ ಜಲ ಅರ್ಪಿಸಬೇಕು. ಸೂರ್ಯ ಮಂತ್ರವನ್ನು ಪಠಿಸಬೇಕು. ಸೂರ್ಯ ಬಲ ಪಡೆಯಬೇಕೆಂದ್ರೆ ಅವಶ್ಯವಾಗಿ ಭಾನುವಾರ ಸೂರ್ಯನಿಗೆ ಜಲ ಅರ್ಪಿಸಬೇಕು.
ಸೂರ್ಯನ ಜೊತೆ ಬುಧ ಗ್ರಹ ಕೂಡ ಕೆಟ್ಟ ಸ್ವಪ್ನ ಬೀಳಲು ಕಾರಣವಾಗುತ್ತದೆ. ಬುಧ ಗ್ರಹ ಕೆಟ್ಟ ಸ್ಥಾನದಲ್ಲಿದ್ದರೆ ಭಯಾನಕ ಕನಸುಗಳು ಬೀಳುತ್ತವೆ. ಹಲ್ಲು ಮುರಿಯುವುದು, ಮೂಳೆ ಮುರಿಯುವಂತಹ ಸ್ವಪ್ನ ಬೀಳುತ್ತದೆ. ಮಂಗಳ ದುರ್ಬಲನಾಗಿದ್ದರೆ ಕೂಡ ಕೆಟ್ಟ ಸ್ವಪ್ನಗಳು ಬೀಳುತ್ತವೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.