ಮನೆಯ ಮೇಲೆ ಬೇರೆಯವರ ಕೆಟ್ಟ ದೃಷ್ಟಿ ಬಿದ್ದಾಗ ಮನೆಯಲ್ಲಿ ಗಲಾಟೆ, ಜಗಳ, ಕಲಹ, ಸಮಸ್ಯೆಗಳು ಕಾಡುತ್ತವೆ. ಮನೆಯಲ್ಲಿ ನಕರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಕೆಲಸದಲ್ಲಿ ಏಳಿಗೆ ಕಾಣುವದಿಲ್ಲ. ಹಾಗಾಗಿ ಶನಿವಾರದಂದು ಈ ಸಣ್ಣ ಪರಿಹಾರ ಮಾಡಿ.
ಸ್ನಾನಾಧಿಗಳನ್ನು ಮುಗಿಸಿದ ಬಳಿಕ ನೀವು ಮನೆಯ ನಾಲ್ಕು ದಿಕ್ಕುಗಳಲ್ಲಿ ಬಿಳಿ ಕಾಗದವನ್ನು ಇರಿಸಿ. ಅದರ ಮೇಲೆ 2 ವೀಳ್ಯದೆಲೆ ಮತ್ತು ಅದರ ಮೇಲೆ ಕಲ್ಲುಪ್ಪನ್ನ ಹಾಕಿ ಮನೆಯ ಎಲ್ಲಾ ಕಿಟಕಿ ಬಾಗಿಲನ್ನು ಮುಚ್ಚಿ. ಒಂದು ಗಂಟೆಯ ಕಾಲ ಹಾಗೇ ಬಿಡಿ.
ಬಳಿಕ ಕಾಗದ ಮತ್ತು ಕಲ್ಲುಪ್ಪನ್ನು ತೆಗೆದು ಚೀಲದಲ್ಲಿ ಹಾಕಿಕೊಂಡು ನಿರ್ಜನ ಪ್ರದ್ರೇಶದಲ್ಲಿ ಎಸೆದು ಮನೆಗೆ ಬಂದು ಕೈಕಾಲು ತೊಳೆದು ಒಳಗೆ ಬನ್ನಿ. ಇದರಿಂದ ಮನೆಯಲ್ಲಿರುವ ಯಾವುದೇ ನಕರಾತ್ಮಕ ಶಕ್ತಿಯನ್ನು ಕಲ್ಲುಪ್ಪು ಸೆಳೆದುಕೊಳ್ಳುತ್ತದೆ. ಮನೆಯಲ್ಲಿ ಏಳಿಗೆಯಾಗುತ್ತದೆ.