ಬೆಂಗಳೂರಿನಲ್ಲಿ ಕೊರೋನಾ ಸೋಂಕು ಹೆಚ್ಚುತ್ತಲೆ ಇದೆ. ಕಳೆದೆರಡು ದಿನಗಳಿಂದ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬರ್ತಿದೆ. ಒಮಿಕ್ರಾನ್ ಸೋಂಕು ಹೆಚ್ಚಾಗ್ತ ಇರುವ ವೇಳೆಯಲ್ಲೆ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಕಂಡುಬಂದಿದೆ.
ವಿದೇಶದಿಂದ ಬಂದ 9 ಮಂದಿ ಪ್ರಯಾಣಿಕರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಇಂದು ಬೆಳಗ್ಗಿನ ಜಾವ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ 9 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.
ಯುಕೆಯಿಂದ ಬಂದ 5, ಅಮೆರಿಕಾದಿಂದ ಬಂದ 2, ಘಾನಾ 1, ಎಡಿನ್ಬರ್ಗ್ ನಿಂದ ಬಂದ ಒಬ್ಬರಲ್ಲಿ ಕೊರೋನಾ ದೃಢವಾಗಿದೆ. ವಿಮಾನ ನಿಲ್ದಾಣದಲ್ಲೆ ನಡೆಸಿದ ಕ್ಷಿಪ್ರ ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ಈ ಒಂಭತ್ತು ಜನರಲ್ಲಿ ಕೊರೋನಾ ಇರುವುದು ದೃಢವಾಗಿದ್ದು, ಎಲ್ಲರ ಸ್ಯಾಂಪಲ್ಸ್ ಅನ್ನೂ ಜಿನೋಮಿಕ್ ಸೀಕ್ವೆನ್ಸಿಂಗ್ ಕಳುಹಿಸಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಮೂಲಗಳಿಂದ ತಿಳಿದು ಬಂದಿದೆ.
20 ಜನರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ
ಈಗಾಗ್ಲೇ ನಗರದಲ್ಲಿ ಹೆಚ್ಚುತ್ತಿರುವ ಸೋಂಕನ್ನ ನಿಯಂತ್ರಿಸಲು ಕಟ್ಟುನಿಟ್ಟಿನ ನಿಯಮಗಳೊಂದಿಗೆ, ನೈಟ್ ಕರ್ಪ್ಯೂ ಸಹ ಜಾರಿಯಾಗಿದೆ. ಆದರೂ ಬೆಂಗಳೂರಿನಲ್ಲಿ ಕೊರೋನಾ ಕ್ಲಸ್ಟರ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದೆರಡು ದಿನಗಳ ಹಿಂದೆ ಓಕಳಿಪುರಂನ ಇಂದ್ರಪ್ರಸ್ತ ಅಪಾರ್ಟ್‌ಮೆಂಟ್ ನ 27 ನಿವಾಸಿಗಳಲ್ಲಿ ಸೋಂಕು ದೃಢವಾಗಿತ್ತು.