ಸಾಮಾನ್ಯವಾಗಿ ನಾವು ಬಾಳೆ ಹಣ್ಣು ಖರೀದಿಸುವಾಗ ಹಳದಿ ಸಿಪ್ಪೆಯ ಬಾಳೆ ಹಣ್ಣು ಖರೀದಿ ಮಾಡುತ್ತೇವೆ. ಆದರೆ ಕೆಂಪು ಸಿಪ್ಪೆಯ ಬಾಳೆ ಹಣ್ಣನ್ನು ತಿಂದು ನೋಡಿ. ಆರೋಗ್ಯಕ್ಕೆ ಅದು ಎಷ್ಟು ಒಳ್ಳೆಯದು ಗೊತ್ತಾ.
ತೂಕ ಇಳಿಸಲು
ಸ್ಥೂಲ ಕಾಯದವರು ದೇಹದ ತೂಕ ಇಳಿಸಬೇಕೆಂದಿದ್ದರೆ ಕೆಂಪು ಬಾಳೆ ಹಣ್ಣು ಸಾಕಷ್ಟು ಸೇವಿಸಿ. ಇದರಲ್ಲಿರುವ ಕಾರ್ಬೋ ಹೈಡ್ರೇಟ್ ಅಂಶ ನಾಲಿಗೆ ಚಪಲಕ್ಕೆ ಕಡಿವಾಣ ಹಾಕುತ್ತದೆ.
ಮೂತ್ರಪಿಂಡದ ಸಮಸ್ಯೆಗೆ
ಮೂತ್ರಪಿಂಡದ ಕಲ್ಲು ಸಮಸ್ಯೆ ಬಾರದಂತೆ ತಡೆಯಲು ಪೊಟಾಸಿಯಂ ಅಂಶವಿರುವ ಆಹಾರ ಸೇವನೆ ಅಗತ್ಯ. ಇದರಲ್ಲಿ ಪೊಟಾಸಿಯಂ ಜೊತೆಗೆ ಸಾಕಷ್ಟು ಕ್ಯಾಲ್ಶಿಯಂ ಅಂಶವಿದ್ದು, ಎಲುಬುಗಳ ಬೆಳವಣಿಗೆಗೂ ಸಹಕಾರಿ.
ಧೂಮಪಾನ ಬಿಡಿಸಲು
ಪೊಟಾಸಿಯಂ ಅಂಶ ಧೂಮಪಾನಿಗಳ ಮನಸ್ಸು ಹೆಚ್ಚು ಆ ಕಡೆಗೆ ಸೆಳೆಯದಂತೆ ತಡೆಯುತ್ತದೆ. ಮಾನಸಿಕವಾಗಿ ಶಕ್ತಿ ನೀಡುವುದರಿಂದ ಧೂಮಪಾನ ಮಾಡಬೇಕೆಂದು ಅನಿಸದು.
ಚರ್ಮ
ಕೆಂಪು ಬಾಳೆಹಣ್ಣು ಸೇವನೆ ಅಥವಾ ಚರ್ಮಕ್ಕೆ ಬಾಳೆ ಹಣ್ಣು ಲೇಪಿಸಿಕೊಳ್ಳುವುದು ಉತ್ತಮ. ಸ್ವಲ್ಪ ಓಟ್ಸ್ ಪುಡಿ ಮತ್ತು ಜೇನು ತುಪ್ಪದ ಜೊತೆಗೆ ಕೆಂಪು ಬಾಳೆ ಹಣ್ಣನ್ನು ಕಿವುಚಿಕೊಂಡು ಫೇಸ್ ಪ್ಯಾಕ್ ತಯಾರಿಸಬಹುದು.
ರಕ್ತ ಶುದ್ದೀಕರಿಸಲು
ಈ ಬಾಳೆಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ಹೇರಳವಾಗಿರುವುದರಿಂದ ರಕ್ತದ ಗುಣಮಟ್ಟ ಮತ್ತು ಹಿಮೋಗ್ಲೋಬಿನ್ ಅಂಶ ಹೆಚ್ಚಿಸುತ್ತದೆ. ಅಲ್ಲದೆ ಇದು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.