ಇಂದು ಮಾರುಕಟ್ಟೆಯಲ್ಲಿ ಕೆಂಪು ಬಾಳೆಹಣ್ಣುಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿವೆ. ಹೊಸದಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಇವುಗಳ ಸೇವನೆಯಿಂದ ಯಾವೆಲ್ಲ ಆರೋಗ್ಯ ಲಾಭಗಳಿವೆ ಎಂಬುದನ್ನು ತಿಳಿಯೋಣ.
ಕಣ್ಣಿನ ಸಮಸ್ಯೆ ಇರುವವರು ಈ ಬಾಳೆಹಣ್ಣನ್ನು ಸೇವಿಸುವುದು ಬಹಳ ಒಳ್ಳೆಯದು. ಇದರಿಂದ ದುರ್ಬಲ ದೃಷ್ಟಿ ನಿವಾರಣೆಯಾಗುತ್ತದೆ. ಇದರಲ್ಲಿ ಸಾಕಷ್ಟು ಪ್ರಮಾಣದ ಪೊಟ್ಯಾಶಿಯಂ ಇದ್ದು ಕಿಡ್ನಿ ಸ್ಟೋನ್ ಸಮಸ್ಯೆಯನ್ನು ನಿವಾರಿಸುತ್ತದೆ.
ಇದರಲ್ಲಿ ಕಡಿಮೆ ಪ್ರಮಾಣದ ಕ್ಯಾಲರಿ ಇರುವುದರಿಂದ ತೂಕ ಇಳಿಕೆಗೂ ಇದು ನೆರವಾಗುತ್ತದೆ. ಈ ಹಣ್ಣು ತಿಂದಾಕ್ಷಣ ನಿಮಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹೀಗಾಗಿ ನಿಮ್ಮ ತೂಕ ಇಳಿಸುವುದು ಸುಲಭವಾಗುತ್ತದೆ.
ರಕ್ತದೊತ್ತಡ ನಿಯಂತ್ರಣಕ್ಕೂ ಕೆಂಪು ಬಾಳೆಹಣ್ಣು ಸಹಕಾರಿ. ಮಲಬದ್ಧತೆ ಸಮಸ್ಯೆಯನ್ನು ದೂರಮಾಡಿ ಉದರ ಸಂಬಂಧಿ ರೋಗಗಳಿಂದ ನಿಮಗೆ ಮುಕ್ತಿ ನೀಡುತ್ತದೆ.