ಕೊರೊನಾ ನಂತರ ಈಗ ಅಂದರೆ 2 ವರ್ಷಗಳ ನಂತರ ಕೃಷ್ಣ ಜನ್ಮಾಷ್ಟಮಿ ಹಬ್ಬದ ಭಾಗವಾಗಿರುವ ದಹಿ ಹಂಡಿಯನ್ನು ಮಹಾರಾಷ್ಟ್ರದಾದ್ಯಂತ ವಿಶೇಷವಾಗಿ ಆಚರಿಸಲಾಗ್ತಿದೆ. ಪ್ರತಿ ಬಾರಿಗಿಂತಲೂ ಈ ವರ್ಷ ಮುಂಬೈನಲ್ಲಿ ಇನ್ನೂ ಒಂದು ಪಟ್ಟು ಹೆಚ್ಚು ಭರ್ಜರಿಯಾಗಿ ಮಾಡಲಾಗುತ್ತಿದೆ.
ಜನ್ಮಾಷ್ಟಮಿ ಅಂಗವಾಗಿ ಈ ಬಾರಿಯೂ ವಾಡಿಕೆಯಂತೆ, ಮುಂಬೈನ ಬೀದಿ ಬೀದಿಗಳಲ್ಲಿ ತೂಗು ಹಾಕಲಾಗಿರುವ ಮಣ್ಣಿನ ಮಡಿಕೆ ಒಡೆಯಲಾಗುತ್ತೆ. ಯುವಕರು ಒಂದುಗೂಡಿ ಪಿರಾಮಿಡ್ ರಚಿಸಿ ಒಬ್ಬರ ಮೇಲೆ ಇನ್ನೊಬ್ಬರು ನಿಂತು ಮಡಕೆ ಒಡೆಯುವ ದೃಶ್ಯವೇ ಅದ್ಭುತವಾಗಿರುತ್ತೆ.
ಈ ಬಾರಿ ಜಯ ಜವಾನ್ ಗೊವದಿ ಪಾಠಕ್ ಅನ್ನೋ ಯುವಕರ ತಂಡ ಮಾನವ ಪಿರಾಮಿಡ್ ರಚಿಸಿದ್ದ ರೀತಿ ಎಲ್ಲರ ಗಮನ ಸೆಳೆದಿತ್ತು. ಸಾಮಾನ್ಯವಾಗಿ ಮೊಸರು ತುಂಬಿದ ಮಡಿಕೆ ಒಡೆಯುವುದಕ್ಕೆ 3-4 ಹಂತದ ಮಾನವ ಪಿರಾಮಿಡ್ ರಚಿಸಲಾಗುತ್ತೆ. ಆದರೆ ಈ ಬಾರಿ ಈ ಜಯ ಜವಾನ್ ಗೊವದಿ ಪಾಠಕ್ ಈ ತಂಡ 9 ಹಂತದ ಮಾನವರ ಪಿರಾಮಿಡ್ ರಚಿಸಿತ್ತು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಾವು ಸಾಂಪ್ರದಾಯಿಕ ಪೂಜೆಯೊಂದಿಗೆ ದಿನವನ್ನು ಆರಂಭಿಸುತ್ತೇವೆ. ಆ ನಂತರ ವಿವಿಧ ಪ್ರದೇಶಗಳಿಗೆ ಹೋಗಿ ತೂಗು ಹಾಕಿರುವ ಮೊಸರು ಮಡಕೆಯನ್ನ ಒಡೆಯುತ್ತೇವೆ. ಆ ಸಂದರ್ಭದಲ್ಲಿ ನಾವು ತೆಗೆದುಕೊಳ್ಳಬೇಕಾದ ಎಲ್ಲ ಎಚ್ಚರಿಕೆಯ ಕ್ರಮವನ್ನ ಕೈಗೊಂಡಿರುತ್ತೇವೆ. ಇನ್ಮುಂದೆ ಹೆಲ್ಮೆಟ್ ಬಳಸುವುದು ಕಡ್ಡಾಯ ಮಾಡುವುದಾಗಿ ಜವಾನ್ ಗೊವದಿ ಪಾಠಕ್ ಕೋಚ್ ಮಾಧ್ಯಮದ ಮುಂದೆ ಹೇಳಿದ್ಧಾರೆ.
ಮೊಸರು ತುಂಬಿದ ಮಡಿಕೆ ಒಡೆಯುವ ಸಂದರ್ಭದಲ್ಲಿ ಅವಘಡಗಳು ಕೂಡಾ ಸಂಭವಿಸಿರುತ್ತೆ. ಆದ್ದರಿಂದ ಈ ಬಾರಿ ಎಲ್ಲ ರೀತಿಯ ಸುರಕ್ಷತಾ ಕ್ರಮದತ್ತ ಗಮನ ಕೊಡಲಾಗಿದೆ. ಆದರೆ ಮಡಿಕೆ ಒಡೆಯುವ ಅವಕಾಶ ಯುವಕವರಿಗೆ ಮಾತ್ರ ನೀಡಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ ಯುವತಿಯರು ಈ ಮಡಕೆ ಒಡೆಯುವ ಸವಾಲನ್ನ ಸ್ವಿಕರಿಸಿ ಆಳೆತ್ತರದಲ್ಲಿ ತೂಗು ಹಾಕಲಾಗಿರುವ ಮಡಕೆಯನ್ನ ಒಡೆಯುತ್ತಾರೆ.