ಕಂಪ್ಯೂಟರ್ ಮೂಲಕ ಟ್ರ್ಯಾಕ್ಟರ್ ಚಾಲನೆಯನ್ನು ನಿಯಂತ್ರಿಸಬಹುದು ಎಂದು ಹೇಳಿದರೆ ನೀವು ಈ ಮಾತನ್ನೂ ನಂಬಲಿಕ್ಕೂ ಇಲ್ಲ. ಟಚ್ ಸ್ಕ್ರೀನ್ ಮೂಲಕ ಟ್ರ್ಯಾಕ್ಟರ್ ಚಲಾಯಿಸೋಕೆ ಅದೇನು ಟೆಸ್ಲಾ ಕಾರೇ..? ಎಂದು ನೀವು ಪ್ರಶ್ನೆ ಮಾಡಬಹುದು. ಆದರೆ ಇಂತಹದ್ದೊಂದು ಟ್ರ್ಯಾಕ್ಟರ್ ಕೂಡ ಆವಿಷ್ಕಾರವಾಗಿದೆ ಎಂದು ಹೇಳಿದರೆ ನೀವು ನಂಬಲೇಬೇಕು.
ಮಿನ್ನೆಸೋಟದ ರೈತ ಡೌಗ್ ನಿಮ್ಜ್ ಎಂಬವರಿಗೆ ಇಂತಹ ಸ್ವಯಂ ಚಾಲಿತ ಟ್ರ್ಯಾಕ್ಟರ್ಗಳು ಹೊಸದೇನಲ್ಲ. ಡೌಗ್ ನಿಮ್ಜ್ ತಮ್ಮ 2000 ಎಕರೆ ಜೋಳ ಹಾಗೂ ಸೋಯಾಬಿನ್ ಜಮೀನಿನಲ್ಲಿ ಜಾನ್ ಡೀರ್ ನ ಕೆಲವು ವರ್ಷಗಳ ಹಿಂದೆ ಒಂದು ಹೊಸ ಯಂತ್ರವನ್ನು ತಂದಿದ್ದರು. ಇದು ಟ್ರ್ಯಾಕ್ಟರ್ನ್ನು ತನ್ನಿಂದ ತಾನಾಗಿಯೇ ಚಲಾಯಿಸುತ್ತಿತ್ತು. ಅಲ್ಲದೇ ಟ್ರ್ಯಾಕ್ಟರ್ನಲ್ಲಿ ಯಾರೊಬ್ಬರು ಇರಬೇಕು ಎಂಬ ಅವಶ್ಯಕತೆ ಕೂಡ ಇರಲಿಲ್ಲ.
ಈ ಮೂಲಕ ವಿಶ್ವದಲ್ಲೇ ಮೊದಲ ಬಾರಿಗೆ ಎಂಬಂತೆ ಡೌಗ್ ನಿಮ್ಜ್ 22 ಟನ್ ತೂಕ್ ಟ್ರ್ಯಾಕ್ಟರ್ ಬಳಕೆ ಮಾಡಿದ ಮೊದಲಿಗ ಎನಿಸಿದರು. ನಿರಂತರವಾದ ಸುಧಾರಣೆ ಹಾಗೂ ಬದಲಾವಣೆಗಳನ್ನು ಮಾಡಲು ಜಾನ್ ಡೀರ್ ಈ ಜಮೀನನ್ನು ತಮ್ಮ ಪರೀಕ್ಷಾ ಮೈದಾನವಾಗಿ ಬಳಕೆ ಮಾಡಿಕೊಂಡರು.
ಕಂಪನಿಯ ಸಿಇಎಸ್ 2022ನೇ ಸಾಲಿನ ಪತ್ರಿಕಾಗೋಷ್ಠಿಯಲ್ಲಿ ಪರಿಚಯಿಸಲಾದ ಈ ಟ್ರ್ಯಾಕ್ಟರ್ಗಳನ್ನು ಜನವರಿ 5ರಂದು ವಿಶ್ವದ ಇತರೆ ಭಾಗಗಳಿಗೂ ಪ್ರಸ್ತುತ ಪಡಿಸಲಾಯ್ತು.
ಮನುಷ್ಯ ಮತ್ತು ಯಂತ್ರದ ನಡುವಿನ ಶತಮಾನದ-ಹಳೆಯ ಯುದ್ಧದಲ್ಲಿ, ಸಂಪೂರ್ಣ ಸ್ವಾಯತ್ತ ಕೃಷಿ ಉಪಕರಣಗಳು ಹೊಸ ತಿರುವು ನೀಡುತ್ತದೆ. ಆಟೋಮೋಟಿವ್ ಫ್ಯಾಕ್ಟರಿಗಳಿಂದ ಅಮೆಜಾನ್ ಗೋ ಕನ್ವೀನಿಯನ್ಸ್ ಸ್ಟೋರ್‌ಗಳವರೆಗೆ ಯಾಂತ್ರೀಕೃತಗೊಂಡ ಬಳಕೆಯಲ್ಲಿ ಏರಿಕೆ ಕಂಡುಬಂದಿದೆ, ರೋಬೋಟ್‌ಗಳು ಅಂತಿಮವಾಗಿ ಲಕ್ಷಾಂತರ ಉದ್ಯೋಗಗಳನ್ನು ತೊಡೆದುಹಾಕುತ್ತವೆ ಎಂಬ ಭಯಕ್ಕೆ ಕಾರಣವಾಗುತ್ತಿದೆ.
ಅದೇನೇ ಇದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ, ಕಾರ್ಮಿಕರು ವಿರಳವಾಗಿರುತ್ತಾರೆ ಮತ್ತು ಯುವಕರು ನಗರಗಳಿಗೆ ಹೋಗುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ಈ ಸುಧಾರಿತ ಯಂತ್ರಗಳು ಹಾಗೂ ವಾಹನಗಳು ಕೃಷಿ ಚಟುವಟಿಕೆಗಳಿಗೆ ಇನ್ನಷ್ಟು ಉತ್ತೇಜನ ನೀಡುತ್ತವೆ ಎಂಬ ಮಾತನ್ನು ತಳ್ಳಿ ಹಾಕುವಂತಿಲ್ಲ.