ಮಣ್ಣಿನ ಸಾವಯವ ಇಂಗಾಲದ (ಎಸ್‌ಒಸಿ) ಪ್ರಮಾಣವನ್ನು ಅಳೆಯಲು ಸಂಶೋಧಕರು ಹೊಸ ತಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಇಲಿನಾಯ್ಸ್‌ನ ಇನ್‌ಸ್ಟಿಟ್ಯೂಟ್ ಫಾರ್ ಸಸ್ಟೈನಬಿಲಿಟಿ, ಎನರ್ಜಿ ಮತ್ತು ಎನ್ವಿರಾನ್‌ಮೆಂಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ವಾತಾವರಣಕ್ಕಿಂತ ಹೆಚ್ಚು ಇಂಗಾಲವು ಭೂಮಿಯಲ್ಲಿ ಸಂಗ್ರಹವಾಗಿದೆ. ಈ ಇಂಗಾಲದ ಪ್ರಮುಖ ಭಾಗವು ಸಾವಯವವಾಗಿದೆ. ಇದನ್ನು ಮಣ್ಣಿನ ಜೈವಿಕ ಇಂಗಾಲ ಎಂದು ಕರೆಯಲಾಗುತ್ತದೆ.
ಕೃಷಿ ಕ್ಷೇತ್ರಗಳಲ್ಲಿನ ಎಸ್‌ಒಸಿ ಪ್ರಮಾಣವನ್ನು ಅಳೆಯುವುದು ಅತ್ಯಗತ್ಯ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಏಕೆಂದರೆ ಈ ಇಂಗಾಲವು ಕೃಷಿ ಮುಖಾಂತರ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಇದು ಹವಾಮಾನ ಬದಲಾವಣೆಗೆ ಕೊಡುಗೆ ನೀಡುತ್ತದೆ.
ಸಾಂಪ್ರದಾಯಿಕವಾಗಿ, ಲ್ಯಾಬ್‌ಗಳಲ್ಲಿನ ವಿಶ್ಲೇಷಣೆಗಳ ಸಹಾಯದಿಂದ ಮಣ್ಣಿನ ಮಾದರಿಯನ್ನು ಬಳಸಿಕೊಂಡು ಎಸ್ಒಸಿ ಅನ್ನು ಅಳೆಯಲಾಗುತ್ತದೆ. ಆದರೆ, ಪ್ರಕ್ರಿಯೆಯನ್ನು ಸಾಕಷ್ಟು ನಿಖರವಾಗಿ ಪರಿಗಣಿಸಲಾಗಿಲ್ಲ. ನಿಖರವಾದ ಮಾಪನವನ್ನು ಪಡೆಯಲು ಯಾವ ಸ್ಥಳಗಳನ್ನು ಸ್ಯಾಂಪಲ್ ಮಾಡಬೇಕು ಅಥವಾ ಎಷ್ಟು ಮಾದರಿಗಳು ಅಗತ್ಯವಿದೆ ಎಂಬುದನ್ನು ನಿರ್ಧರಿಸಲು ಕಷ್ಟವಾಗುತ್ತದೆ.
ಅಂದಹಾಗೆ, ಅಮೆರಿಕಾದ ಡಿಪಾರ್ಟ್ಮೆಂಟ್ ಆಫ್ ಎನರ್ಜಿ ಪ್ರಾಜೆಕ್ಟ್ ನಡೆಸಿದ ಇತ್ತೀಚಿನ ಅಧ್ಯಯನದಲ್ಲಿ ಸಂಶೋಧಕರು ಎಸ್ಒಸಿ ಅನ್ನು ಹೆಚ್ಚು ನಿಖರವಾಗಿ ಅಳೆಯುವ ತಂತ್ರಗಳನ್ನು ಮೌಲ್ಯಮಾಪನ ಮಾಡಿದ್ದಾರೆ.
ಸ್ಮಾರ್ಟ್ ಫಾರ್ಮ್ ಯೋಜನೆಯು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಅಳೆಯಲು ಮತ್ತು ಬೆಳೆಗಳ ಉತ್ಪಾದನೆಯಿಂದಾಗಿ ಎಸ್ಒಸಿ ಯಲ್ಲಿನ ಬದಲಾವಣೆಯನ್ನು ಅಳೆಯಲು ನಿಖರವಾದ ಪರಿಹಾರವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.