ಕೇಂದ್ರ ಸರ್ಕಾರ ಇದೀಗ ಒಂದಿಷ್ಟು ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಿದೆ. ಗೋಧಿ, ಬಾರ್ಲಿ, ಅಲಸಂದೆ, ಹೆಸರುಕಾಳು, ಸೂರ್ಯಕಾಂತಿ, ಸಾಸಿವೆ ಸೇರಿದಂತೆ 6 ಬೇಳೆಕಾಳುಗಳ ಕನಿಷ್ಠ ಖರೀದಿ ಬೆಂಬಲ ಬೆಲೆಯನ್ನು ಕೇಂದ್ರ ಸರಕಾರ ಹೆಚ್ಚಿಸುವ ಮೂಲಕ ರೈತರಿಗೆ ಸಂತಸ ಸುದ್ದಿಯನ್ನು ನೀಡಿದೆ.
ಮಾರುಕಟ್ಟೆ ಋತುವಿಗಾಗಿ ಎಲ್ಲಾ ಕಡ್ಡಾಯ ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳ ಹೆಚ್ಚಳಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ. ಇನ್ನು ಬೇಳೆಗೆ ಪ್ರತಿ ಕ್ವಿಂಟಾಲ್‌ಗೆ 500 ರೂ. ಎಂಎಸ್‌ಪಿಯಲ್ಲಿ ಸಂಪೂರ್ಣ ಗರಿಷ್ಠ ಹೆಚ್ಚಳ ಮಾಡಲಾಗಿದೆ. ಇನ್ನು ಸಾಸಿವೆಗೆ 400 ರೂ.ಗಳಷ್ಟು ಹೆಚ್ಚಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ ನಡೆಸಲಾಯ್ತು. ಸಭೆ ಬಳಿಕೆ ಈ ವಿಚಾರ ಹೇಳಿದ್ದಾರೆ ಕೇಂದ್ರ ಸಚಿವ. ಗೋಧಿಯ ಎಂಎಸ್‌ಪಿಯನ್ನು 110 ರೂ, ಬಾರ್ಲಿ 100ರೂ, ಬೇಳೆ 105ರೂ, ಬೇಳೆ ಅಥವಾ ಮಸೂರ್ 500ರೂ, ರೇಪ್‌ಸೀಡ್ ಮತ್ತು ಸಾಸಿವೆ 400ರೂ. ಮತ್ತು ಸೂರ್ಯಕಾಂತಿ ಬೀಜ 209 ರೂ. ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.