ಎಷ್ಟೇ ಒಳ್ಳೆಯ ಶಾಂಪೂ ಉಪಯೋಗಿಸಿದರೂ ಕೂದಲು ಒಂದು ರೀತಿ ಒರಟು ಒರಟಾಗಿರುತ್ತದೆ. ಇದಕ್ಕಾಗಿ ಕೆಲವರು ಕಂಡೀಷನರ್ ಮೊರೆ ಹೋಗುತ್ತಾರೆ.
ಶಾಂಪೂ ಹಚ್ಚಿ ತೊಳೆದ ಕೂದಲಿಗೆ ಕಂಡೀಷನರ್ ಹಾಕಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಿದಾಗ ಕೂದಲು ನುಣುಪಾಗುತ್ತದೆ. ಆದರೆ ಈ ಕೆಮಿಕಲ್ ಯುಕ್ತ ಕಂಡೀಷನರ್ ನಿಂದ ಕೂದಲು ಆ ಕ್ಷಣಕ್ಕೆ ನುಣಪಾದರೂ ಇದರಿಂದ ಕೂದಲು ಹೊಳಪು ಕಳೆದುಕೊಳ್ಳುತ್ತದೆ.
ಮನೆಯಲ್ಲಿಯೇ ಸುಲಭವಾಗಿ ಕಂಡೀಷನರ್ ಮಾಡುವ ವಿಧಾನ ಇಲ್ಲಿದೆ. ಟ್ರೈ ಮಾಡಿ.
1 ಗ್ಲಾಸ್ ನೀರು ತೆಗೆದುಕೊಂಡು ಅದನ್ನು ಒಂದು ಪಾತ್ರೆಗೆ ಹಾಕಿ ಗ್ಯಾಸ್ ಮೇಲೆ ಇಡಿ. ಇದು ಕುದಿಯಲು ಆರಂಭಿಸಿದಾಗ ಇದಕ್ಕೆ ¼ ಚಮಚದಷ್ಟು ಅಗಸೆಬೀಜ ಹಾಕಿ ಚೆನ್ನಾಗಿ ಕುದಿಸಿ. 5 ನಿಮಿಷ ಕುದಿಸಿದರೆ ಸಾಕು. ನಂತರ ಇದನ್ನು ಒಂದು ಪಾತ್ರೆಗೆ ಸೋಸಿಕೊಳ್ಳಿ. ಇದಕ್ಕೆ 4 ಹನಿ ಆಲಿವ್ ಎಣ್ಣೆ, 5 ಹನಿ ಲ್ಯಾವೆಂಡರ್ ಎಸೆನ್ಸ್ ಹಾಕಿ ಮಿಕ್ಸ್ ಮಾಡಿ.
ನಂತರ ಇದನ್ನು ಒಂದು ಬಾಟಲಿಗೆ ಹಾಕಿ. ಸ್ವಲ್ಪ ಹೊತ್ತು ಬಿಟ್ಟಾಗ ಇದು ಜೆಲ್ ರೀತಿ ಆಗುತ್ತದೆ. ತಲೆ ಸ್ನಾನದ ಬಳಿಕ ಕಂಡೀಷನರ್ ಆಗಿ ಇದನ್ನು ಉಪಯೋಗಿಸಿ. ಕೂದಲು ನಯವಾಗುತ್ತದೆ. ಹಾಗೇ ಉದುರುವುದು ಕೂಡ ಕಡಿಮೆಯಾಗುತ್ತದೆ.