
ಸುರಂಗಮಾರ್ಗ ನಿಲ್ದಾಣದಲ್ಲಿ ಕುಸಿದುಬಿದ್ದ ಸೀಲಿಂಗ್ ಪ್ಯಾನೆಲ್ ನಿಂದ ಬಹುತೇಕವಾಗಿ ತಪ್ಪಿಸಿಕೊಂಡ ಮಹಿಳೆಯೊಬ್ಬರು ಅದ್ಭುತವಾಗಿ ಪಾರಾಗಿದ್ದಾರೆ.
ಈ ವಿಡಿಯೋವನ್ನು ಬಿಬಿಸಿ ನ್ಯೂಸ್ (ವಿಶ್ವ) ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ರೈಲಿನಿಂದ ಇಳಿದ ನಂತರ, ಪ್ರಯಾಣಿಕರು ಮೆಟ್ಟಿಲುಗಳ ಕಡೆಗೆ ಹೋಗುತ್ತಿರುತ್ತಾರೆ.
ಈ ವೇಳೆ ಇದ್ದಕ್ಕಿದ್ದಂತೆ ಮೇಲ್ಘಾವಣಿಯು ಕುಸಿದು ಬೀಳುತ್ತೆ. ಮೇಲ್ಛಾವಣಿ ಕುಸಿದು ಬಿದ್ದ ಸ್ವಲ್ಪವೇ ದೂರದಲ್ಲಿ ಮಹಿಳೆಯು ಬರ್ತಿದ್ದು ಅವ್ರು ಪಾರಾಗಿದ್ದಾರೆ.
ಈ ವಿಡಿಯೋ ವೈರಲ್ ಆಗಿದ್ದು ಮಹಿಳೆಯ ಅದೃಷ್ಟದ ಬಗ್ಗೆ, ದೈವಾನುಗ್ರಹದ ಬಗ್ಗೆ ಎಲ್ರೂ ಮಾತಾಡ್ತಿದ್ದಾರೆ.