ಹರಿಯಾಣದ ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಅವರ ಬೆಂಗಾವಲು ವಾಹನ ಮಂಗಳವಾರ ಬೆಳಗ್ಗೆ ಪೊಲೀಸ್ ಜೀಪಿಗೆ ಡಿಕ್ಕಿ ಹೊಡೆದಿದ್ದು ಉಪಮುಖ್ಯಮಂತ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಚೌತಾಲಾ ಅವರ ಬೆಂಗಾವಲು ಪಡೆ ಹಿಸಾರ್ನಿಂದ ಸಿರ್ಸಾಗೆ ಹೋಗುತ್ತಿದ್ದಾಗ ಅಗ್ರೋಹಾ ಬಳಿ ಅಪಘಾತ ಸಂಭವಿಸಿದೆ.
ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಅವರ ಬೆಂಗಾವಲು ವಾಹನವು ಹಿಸಾರ್ನಿಂದ ಸಿರ್ಸಾಗೆ ಹೋಗುತ್ತಿದ್ದಾಗ ಮಂಜಿನಿಂದಾಗಿ ಧಂಧೂರ್ ಗ್ರಾಮದಲ್ಲಿ ಅಪಘಾತಕ್ಕೀಡಾಗಿದೆ. ಬೆಂಗಾವಲು ಪಡೆಯಲ್ಲಿದ್ದ ಕಮಾಂಡೋಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪರಿಣಾಮ ವಾಹನವನ್ನು ಬದಲಾಯಿಸಲಾಗಿದೆ.
ದಟ್ಟವಾದ ಮಂಜಿನ ಪರಿಣಾಮವಾಗಿ ಕಡಿಮೆ ಗೋಚರತೆಯಿಂದಾಗಿ ರಾಜ್ಯ ಪೊಲೀಸರ ಬೊಲೆರೊ ಕಾರು ಹಠಾತ್ ಬ್ರೇಕ್ ಹಾಕಿದಾಗ ದುಷ್ಯಂತ್ ಚೌಟಾಲಾ ಅವರ ಬೆಂಗಾವಲು ಪಡೆಗೆ ಡಿಕ್ಕಿ ಹೊಡೆದಿದೆ. ಉಪ ಮುಖ್ಯಮಂತ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಏತನ್ಮಧ್ಯೆ, ಮತ್ತೊಂದು ಘಟನೆಯಲ್ಲಿ ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಅವರು ತಮ್ಮ ಅಧಿಕೃತ ಕಾರಿನಲ್ಲಿ ಅಂಬಾಲಾ ಕ್ಯಾಂಟ್ನಿಂದ ಗುರುಗ್ರಾಮ್ಗೆ ಪ್ರಯಾಣಿಸುತ್ತಿದ್ದಾಗ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಕುಂಡ್ಲಿ-ಮನೇಸರ್-ಪಲ್ವಾಲ್ ಎಕ್ಸ್ ಪ್ರೆಸ್ವೇ ಎಂದು ಕರೆಯಲ್ಪಡುವ ವೆಸ್ಟರ್ನ್ ಪೆರಿಫೆರಲ್ ಎಕ್ಸ್ ಪ್ರೆಸ್ವೇಯಲ್ಲಿ ಅವರ ಮರ್ಸಿಡಿಸ್ ಬೆಂಜ್ ಇ200 ಶಾಕರ್ ಎರಡು ತುಂಡಾಗಿ ಒಡೆದಿದೆ. ಅವರು ಅಂಬಾಲಾ ಕ್ಯಾಂಟ್ನಿಂದ ಗುರುಗ್ರಾಮ್ಗೆ ಪ್ರಯಾಣಿಸುತ್ತಿದ್ದಾಗ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ಉತ್ತರ ಪ್ರದೇಶದ ಮೇಲೆ ದಟ್ಟವಾದ ಮಂಜಿನ ಸ್ಥಿತಿಯಿಂದ ರಸ್ತೆಗಳಲ್ಲಿ ವಾಹನಗಳು ಅಪಘಾತಕ್ಕೀಡಾಗುತ್ತಿವೆ. ಮುಂದಿನ ಎರಡು ಮೂರು ಗಂಟೆಗಳ ಕಾಲ ಮಂಜಿನ ಸ್ಥಿತಿ ಮುಂದುವರಿಯುತ್ತದೆ ಮತ್ತು ಕ್ರಮೇಣ ಸುಧಾರಿಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.