ಕೂದಲ ಹೊಳಪಿಗೆ ಬ್ಯೂಟಿ ಪಾರ್ಲರ್ ಗೇ ಹೋಗಬೇಕೆಂದೇನಿಲ್ಲ, ಶ್ಯಾಂಪುವನ್ನೇ ಬಳಸಬೇಕೆಂದೇನಿಲ್ಲ. ಮನೆಯಲ್ಲೇ ಸಿಗುವ ವಸ್ತುಗಳಿಂದ ಕೂದಲ ಹೊಳಪನ್ನು ಪಡೆಯಬಹುದು. ಹೇಗೆನ್ನುತ್ತೀರಾ?
ಕೆಂಪು ದಾಸವಾಳದ ಎಲೆಯನ್ನು ತೊಳೆದು ನುಣ್ಣಗೆ ರುಬ್ಬಿ. ಇದಕ್ಕೆ ಮೊಸರು ಸೇರಿಸಿ ತಲೆಗೆ ಹಚ್ಚಿಕೊಂಡರೆ ಕೂದಲು ಹೊಳಪು ಪಡೆದುಕೊಳ್ಳುತ್ತದೆ.
ನೆಲ್ಲಿಕಾಯಿ ಪೇಸ್ಟ್ ಮಾಡಿ ಎಣ್ಣೆಯೊಂದಿಗೆ ಬೆರೆಸಿ ಕುದಿಸಿ ಬಳಸುವುದರಿಂದ ಕೂದಲಿಗೆ ಹೊಳಪು ಮಾತ್ರವಲ್ಲ, ಹೊಟ್ಟು, ತುರಿಕೆ, ಕೂದಲು ಉದುರುವ ಸಮಸ್ಯೆಗಳೂ ದೂರವಾಗುತ್ತವೆ.
ಮೊಸರಿಗೆ ಜೇನು ಅಥವಾ ನಿಂಬೆರಸ ಬೆರೆಸಿ ಹಚ್ಚಿಕೊಳ್ಳುವುದರಿಂದ ಇದಕ್ಕಿಂತ ಉತ್ತಮವಾದ ಕಂಡಿಷನರ್ ಮತ್ತೊಂದಿಲ್ಲ. ಕೂದಲಿನ ಎಣ್ಣೆಯಂಶ ಹೋಗದಿದ್ದರೆ ಲಿಂಬೆ ರಸ ಬಳಸಬಹುದು.
ಶುದ್ಧವಾದ ತೆಂಗಿನೆಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದಲೂ ಕೂದಲು ಹೊಳಪು ಪಡೆದುಕೊಳ್ಳುತ್ತದೆ. ತಿಂಗಳಿಗೊಮ್ಮೆ ಕೂದಲಿಗೆ ಮೆಹಂದಿ ಹಚ್ಚುವುದು ಒಳ್ಳೆಯದು. ಇದು ಕೂದಲನ್ನು ಮೆದುಗೊಳಿಸುತ್ತದೆ ಹಾಗೂ ವಿಶೇಷ ಹೊಳಪು ನೀಡುತ್ತದೆ.