ಕೂದಲು ಸೊಂಪಾಗಿ ಬೆಳೆಯಬೇಕೆಂದು ಎಲ್ಲಾ ಹೆಣ್ಣು ಮಕ್ಕಳು ಇಷ್ಟ ಪಡುತ್ತಾರೆ. ಕೆಲವರಿಗೆ ವಂಶಪಾರಂಪರ್ಯವಾಗಿ ಕೂದಲು ಚೆನ್ನಾಗಿದ್ದರೆ ಮತ್ತೇ ಕೆಲವರು ಪೋಷಣೆ ಮಾಡುವುದರಿಂದ ಆರೋಗ್ಯಕರ ಕೂದಲನ್ನು ಹೊಂದಿರುತ್ತಾರೆ.
ಕೂದಲ ಪೋಷಣೆಗೆ ಹಲವು ವಿಧಾನಗಳಿವೆ. ಕೂದಲಿಗೆ ಆರೋಗ್ಯಕರ ಬುಡವಿದ್ದರೆ ಕೂದಲು ತೆಳುವಾಗುವುದು, ತುದಿ ಸೀಳುವುದು, ಕಾಂತಿ ಹೀನವಾಗುವುದು, ಉದುರುವುದು ಮುಂತಾದ ಸಮಸ್ಯೆಗಳು ಎದುರಾಗುವುದಿಲ್ಲ.
ಹಾಗೆ ಕೂದಲಿನ ಬುಡ ಸದೃಢಗೊಳಿಸಲು, ಕಾಂತಿಯುಕ್ತವಾಗಿ ಮಾಡಲು ಹರಳೆಣ್ಣೆ ಸಹಕಾರಿ. ಕೊಬ್ಬರಿ ಎಣ್ಣೆ, ಹರಳಣ್ಣೆ ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಕೊಂಚ ಬಿಸಿ ಮಾಡಿ ತಲೆಯ ಬುಡಕ್ಕೆ ಮಸಾಜ್ ಮಾಡಬೇಕು. ನಾಲ್ಕಾರು ಗಂಟೆಗಳ ನಂತರ ತಲೆ ತೊಳೆದುಕೊಳ್ಳುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.