ಕೂದಲು ತೆಳ್ಳಗಾಗುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಅನುಭವಿಸುತ್ತಿದ್ದಾರೆ. ಒತ್ತಡ, ಹಾರ್ಮೋನ್, ಕೂದಲಿಗೆ ಬಣ್ಣ ಹಾಕುವುದು, ಖಿನ್ನತೆ, ಅನಾರೋಗ್ಯದ ಕಾರಣ, ಆಹಾರಗಳಿಂದ ಕೂದಲು ತೆಳ್ಳಗಾಗುತ್ತದೆ. ಇದರಿಂದ ಕೂದಲು ಬೇಗನೆ ತುಂಡಾಗುತ್ತದೆ. ಈ ತೆಳ್ಳಗಾದ ಕೂದಲು ಮತ್ತೆ ದಪ್ಪವಾಗಲು ಈ ಹೇರ್ ಪ್ಯಾಕ್ ನ್ನು ಹಚ್ಚಿ.
*ಮೊಟ್ಟೆ ಮತ್ತು ಹಾಲು : ಇವೆರಡರಲ್ಲಿ ಪ್ರೋಟೀನ್ ಸಮೃದ್ಧವಾಗಿದೆ, ಕೂದಲಿನ ಬೆಳವಣಿಗೆಗೆ ಪ್ರೋಟೀನ್ ಅತ್ಯವಶ್ಯಕವಾಗಿರುವುದರಿಂದ 1 ಮೊಟ್ಟೆ ಹಾಗೂ 1 ಕಪ್ ಹಾಲು, 2 ಚಮಚ ನಿಂಬೆ ರಸ, ಕೆಲವು ಹನಿ ತೆಂಗಿನೆಣ್ಣೆ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ.
*ಮೆಂತ್ಯ ಮತ್ತು ಮೊಸರು : ಇದರಲ್ಲಿ ಪ್ರೋಟೀನ್ ಮತ್ತು ಕಬ್ಬಿಣ ಸಮೃದ್ದವಾಗಿರುತ್ತದೆ. ಇದು ಕೂದಲು ಉದುರುವುದನ್ನು ತಡೆಯುತ್ತದೆ. 1 ಚಮಚ ಮೆಂತ್ಯ ಬೀಜದ ಪುಡಿಗೆ 5 ಚಮಚ ಮೊಸರು, ಕೆಲವು ಹನಿ ಆಲಿವ್ ಆಯಿಲ್ ನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 1 ಗಂಟೆ ಬಿಟ್ಟು ವಾಶ್ ಮಾಡಿ.
*ಈರುಳ್ಳಿ ಮತ್ತು ತೆಂಗಿನೆಣ್ಣೆ : ಇದು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿ ಕೂದಲಿನ ಸಮಸ್ಯೆಯನ್ನು ನಿವಾರಿಸುತ್ತದೆ. ಸ್ವಲ್ಪ ಈರುಳ್ಳಿ ರಸ, ತೆಂಗಿನೆಣ್ಣೆ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ 30 ನಿಮಿಷ ಬಿಟ್ಟು ವಾಶ್ ಮಾಡಿ.