ಇಂದಿನ ದಿನಗಳಲ್ಲಿ ಫ್ಯಾಷನ್ ಸಾಕಷ್ಟು ಬದಲಾಗ್ತಿದೆ. ಫ್ಯಾಷನ್ ಹೆಸರಿನಲ್ಲಿ ಹುಡುಗಿಯರು ಕೂದಲನ್ನು ಕಟ್ಟುವುದಿಲ್ಲ. ಕೂದಲು ಬಿಟ್ಟುಕೊಳ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ಈ ಬಗ್ಗೆಯೂ ಹೇಳಲಾಗಿದೆ.
ಸಾಮಾನ್ಯವಾಗಿ ಭಾರತೀಯ ಸಂಸ್ಕೃತಿ ಪ್ರಕಾರ ಕೂದಲನ್ನು ಸದಾ ಕಟ್ಟಿಕೊಂಡಿರಬೇಕು. ಕೂದಲು ಬಿಟ್ಟಿದ್ದರೆ ಅದು ಸಿಕ್ಕಾಗುವ ಸಾಧ್ಯತೆಯಿದೆ. ಸಿಕ್ಕಾದ, ಗೋಜಲಾದ್ರೆ ಆಕೆಯನ್ನು ಕೈಕೆಗೆ ಹೋಲಿಸಲಾಗುತ್ತದೆ. ಇದು ಅಮಂಗಲ ಎನ್ನಲಾಗುತ್ತದೆ.
ಕೂದಲು ಕಟ್ಟದೆ ಹೋದ ಮಹಿಳೆ ಆಲೋಚನೆ ಮತ್ತು ನಡವಳಿಕೆ ಎರಡೂ ಕ್ಷೀಣಿಸಲು ಪ್ರಾರಂಭಿಸುತ್ತದೆ. ಉದ್ದದ ಕೂದಲು ಬಿಡುವ ಪುರುಷನ ಮಾನಸಿಕ ಸ್ಥಿತಿ ಕೂಡ ಕ್ಷೀಣಿಸುತ್ತದೆ ಎನ್ನಲಾಗಿದೆ.
ಕೂದಲು ತಾಂತ್ರಿಕ ವಿದ್ಯೆಗೆ ಬಳಕೆಯಾಗುತ್ತದೆ. ಮಹಿಳೆ ಕೂದಲು ಬಿಟ್ಟುಕೊಂಡು ಅಶುದ್ಧ ಅಥವಾ ಅಪರಿಚಿತ ಸ್ಥಳಕ್ಕೆ ಹೋದಾಗ ದುಷ್ಟ ಶಕ್ತಿಗಳು ಅವಳ ಮೇಲೆ ಪ್ರಾಬಲ್ಯ ಸಾಧಿಸುತ್ತವೆ. ಇದಲ್ಲದೆ ತೆರೆದ ಕೂದಲು ಅಪರಿಚಿತ ಶಕ್ತಿಯನ್ನು ಆಕರ್ಷಿಸುತ್ತದೆ.