ಒತ್ತಡದ ಜೀವನ, ಆಹಾರ ಪದ್ಧತಿ, ಅನುವಂಶೀಯತೆ ಮೊದಲಾದ ಕಾರಣಗಳಿಂದ ಹರೆಯದಲ್ಲೇ ಕೂದಲು ಉದುರುವುದು, ಬಾಲ ನೆರೆ ಬರುವುದು ಸಾಮಾನ್ಯವಾಗಿದೆ.
ಕೂದಲು ಉದುರದಂತೆ ರಕ್ಷಿಸಿಕೊಳ್ಳಲು ಕೆಲವೊಂದು ಸರಳ ಉಪಾಯ ಇಲ್ಲಿದೆ. ಇದನ್ನು ಅನುಸರಿಸಿದರೆ ಕೂದಲು ಉದುರುವುದನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.
ತಲೆ ಸ್ನಾನ ಮಾಡಿದ ನಂತರ ಹಸಿ ಕೂದಲನ್ನು ಬಾಚಿಕೊಳ್ಳುವುದರಿಂದ ಕೂದಲಿಗೆ ಹಾನಿಯುಂಟಾಗುತ್ತದೆ. ಹೀಗಾಗಿ ಕೂದಲು ಸಂಪೂರ್ಣವಾಗಿ ಒಣಗಿದ ನಂತರವೇ ಬಾಚಿಕೊಳ್ಳುವುದು ಸೂಕ್ತ.
ಬಿಳಿ ಕೂದಲಿಗೆ ಬಣ್ಣ ಹಾಕಿಕೊಳ್ಳುವ ವೇಳೆಯೂ ಹೇರ್ ಡೈ ಕುರಿತು ಎಚ್ಚರಿಕೆ ವಹಿಸುವುದು ಅಗತ್ಯ. ಹಲವು ಹೇರ್ ಡೈ ಗಳಲ್ಲಿ ಕೆಮಿಕಲ್ ಸೇರಿಸುವುದರಿಂದ ಇದು ಕೂದಲಿಗೆ ಹಾನಿಯುಂಟು ಮಾಡುತ್ತದೆ.
ಶಾಂಪೂ ಬಳಕೆಯಲ್ಲೂ ಕೂದಲಿಗೆ ಯಾವುದು ಸೂಕ್ತವೋ ಅದನ್ನು ಬಳಸುವುದರಿಂದ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಕೂದಲನ್ನು ಒಣಗಿಸುವ ವೇಳೆ ಡ್ರೈಯರ್ ತುಂಬಾ ಬಿಸಿಯಾಗಿದ್ದರೂ ಕೂದಲಿಗೆ ಹಾನಿಕಾರಕ.