ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ಮಕ್ಕಳನ್ನು ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆಯೆಂದರೆ ಕೂದಲು ಉದುರುವಿಕೆ. ಕೂದಲು ಉದುರುವಿಕೆಗೆ ಮುಖ್ಯ ಕಾರಣ ಮಾಲಿನ್ಯಗೊಂಡ ಪರಿಸರ, ವಿಟಮಿನ್ ಡಿ3 ಕೊರತೆ ಮತ್ತು ಗಡಸು ನೀರು. ಕೂದಲು ಉದುರುವಿಕೆ ಸಮಸ್ಯೆಯಿಂದ ಯುವಕರು ಹೆಚ್ಚು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಕೂದಲು ಉದುರುವಿಕೆ ಸಮಸ್ಯೆಗೆ ಇಲ್ಲಿದೆ ಕೆಲವು ಸರಳ ಮಾರ್ಗಗಳು.
ಕೂದಲು ಉದುರುವಿಕೆಗೆ ಮುಖ್ಯ ಕಾರಣ ವಿಟಮಿನ್ ಡಿ3 ಕೊರತೆ. ವಿಟಮಿನ್ ಡಿ3 ಕೊರತೆ ಇದ್ದಲ್ಲಿ ವೈದ್ಯರನ್ನು ಭೇಟಿಮಾಡಿ ಪರೀಕ್ಷಿಸಿಕೊಳ್ಳಬೇಕು.
ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ; 6 ಮಂದಿ ದುರ್ಮರಣ
ಆಯುರ್ವೇದ ಅಂಗಡಿಯಲ್ಲಿ ದೊರೆಯುವ ಬೃಂಗರಾಜ ಪೌಡರ್ ಅನ್ನು ದಿನಕ್ಕೆರಡು ಬಾರಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಬೃಂಗರಾಜ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವಿಕೆ ಸಮಸ್ಯೆ ಕಡಿಮೆಯಾಗುತ್ತದೆ.
ಗ್ರೀನ್ ಟೀಯನ್ನು ಸ್ವಲ್ಪ ನೀರಿಗೆ ಹಾಕಿ ಕುದಿಸಿ ಆರಿದ ನಂತರ ನೀರನ್ನು ಶೋಧಿಸಿ ತಲೆಗೆ ಹಚ್ಚಿ 15 ನಿಮಿಷಗಳ ಬಳಿಕ ತಲೆ ಸ್ನಾನ ಮಾಡಿದರೆ ಕೂದಲು ಉದುರುವಿಕೆ ಸಮಸ್ಯೆ ಪರಿಹಾರವಾಗುತ್ತದೆ.
ಸಲ್ಫೇಟ್ ಯುಕ್ತ ಶಾಂಪೂವಿನ ಬದಲು ನೈಸರ್ಗಿಕ ಶಾಂಪೂವನ್ನು ಬಳಸುವುದರಿಂದ ಕೂದಲು ಉದುರುವಿಕೆ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.
ಗಡಸು ನೀರಿಗೆ ಫಿಲ್ಟರ್ ಬಳಸುವುದರಿಂದ ಕೂದಲು ಉದುರುವಿಕೆ ತಕ್ಕ ಮಟ್ಟಿಗೆ ಕಡಿಮೆಯಾಗುತ್ತದೆ.