ಕೂದಲು ಉದುರುವಿಕೆ ಈಗ ಎಲ್ಲರಲ್ಲೂ ಕಂಡು ಬರುವ ಸಮಸ್ಯೆ. ಕೆಲವರಿಗೆ ಇದು ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತದೆ. ಯಾವುದೇ ಟಿಪ್ಸ್ ಅನುಸರಿಸಿದರೂ ಕಡಿಮೆಯಾಗಲ್ಲ. ಅಂತಹವರು ಒಮ್ಮೆ ಈ ವಿಧಾನ ಅನುಸರಿಸಿ ನೋಡಿ.
ಆರೋಗ್ಯವಂತ ಕೂದಲು ಹೊಂದಲು ವಾರಕ್ಕೆರಡು ಬಾರಿ ಮಾತ್ರ ಶಾಂಪೂವಿನಿಂದ ತೊಳೆಯಿರಿ. ರಾಸಾಯನಿಕಗಳು ಕಡಿಮೆ ಇರುವ ಶಾಂಪೂವನ್ನು ಉಪಯೋಗಿಸಿ. ಬೇಬಿ ಶಾಂಪೂ ಉಪಯೋಗಿಸಿ. ಅದು ತುಂಬಾ ಒಳ್ಳೆಯದು.
ಒದ್ದೆ ಕೂದಲನ್ನು ಬಾಚಿಕೊಳ್ಳಬೇಡಿ. ಮದ್ಯಪಾನ, ಧೂಮಪಾನವನ್ನು ಮಾಡದಿರಿ. ಒತ್ತಡ ಕಡಿಮೆ ಮಾಡಿಕೊಳ್ಳಿ. ಒತ್ತಡದಿಂದ ತುಂಬಾ ಕೂದಲು ಉದುರುತ್ತದೆ.
ನಿಮ್ಮ ಆಹಾರದಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಸೇರಿಸಿ. ಹಾಲು, ಮೊಟ್ಟೆ, ಚಿಕನ್ ಅನ್ನು ಸೇವಿಸಿ. ಪಾಲಕ್ ಸೊಪ್ಪು ಬ್ರೋಕಲಿ ತಿಂದರೆ ತುಂಬಾ ಒಳ್ಳೆಯದು.
ಈರುಳ್ಳಿಯ ರಸವನ್ನು ಹಚ್ಚಿ 1 ಗಂಟೆ ನಂತರ ಸ್ನಾನ ಮಾಡಿ. ಇದು ಹೊಟ್ಡಿನ ಸಮಸ್ಯೆಯಿಂದಲೂ ಮುಕ್ತಿ ಕೊಡುತ್ತದೆ.