ಇತ್ತೀಚಿನ ದಿನಗಳಲ್ಲಿ ಅನೇಕರು ಕೂದಲು ಉದುರುವಿಕೆಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದು ಸಾಮಾನ್ಯವಾಗಿ ಆನುವಂಶಿಕ ಕಾರಣಗಳಿಂದಾಗಿರಬಹುದು. ಆದರೆ ಕಲುಷಿತ ನೀರು, ಒತ್ತಡ ಮತ್ತು ಅನಾರೋಗ್ಯಕರ ಆಹಾರ ಕೂಡ ಕೂದಲು ಉದುರಲು ಕಾರಣವಾಗುತ್ತದೆ. ಕೂದಲು ನಿರಂತರವಾಗಿ ಉದುರುತ್ತಿದ್ದರೆ ಕೂಡಲೇ ಜಾಗರೂಕರಾಗಿರಿ. ಇಲ್ಲದಿದ್ದರೆ ಚಿಕ್ಕ ವಯಸ್ಸಿನಲ್ಲೇ ತಲೆ ಬೋಳಾಗುವ ಆತಂಕ ಎದುರಾಗುತ್ತದೆ. ಕೂದಲು ಚೆನ್ನಾಗಿರಬೇಕೆಂದರೆ ನಾವು ಸೇವಿಸುವ ಆಹಾರ ಕೂಡ ಆರೋಗ್ಯಕರವಾಗಿರಬೇಕು. ಕೆಲವು ಅನಾರೋಗ್ಯಕರ ಅಭ್ಯಾಸಗಳು ಮತ್ತು ಆಹಾರದಿಂದ ಸಂಪೂರ್ಣವಾಗಿ ದೂರವಿರಬೇಕು.
ಡಯಟ್ ಸೋಡಾ – ಯುವಜನತೆಯಲ್ಲಿ ಡಯಟ್ ಸೋಡಾ ಕುಡಿಯುವ ಟ್ರೆಂಡ್ ಹೆಚ್ಚಾಗಿ ಕಂಡು ಬರುತ್ತಿದೆ. ಇದು ಅಕಾಲಿಕ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಡಯಟ್ ಸೋಡಾ ಕೃತಕ ಸಿಹಿಕಾರಕವನ್ನು ಹೊಂದಿರುತ್ತದೆ, ಅದು ನೆತ್ತಿಯನ್ನು ಹಾನಿಗೊಳಿಸುತ್ತದೆ. ಆದ್ದರಿಂದ ತಲೆ ಬೋಳಾಗದಂತೆ ತಡೆಯಲು ಡಯಟ್ ಸೋಡಾ ಸೇವನೆಯನ್ನು ನಿಲ್ಲಿಸಿ.
ಸಿಹಿ ತಿನಿಸು – ಸಕ್ಕರೆಯನ್ನು ಸಾಮಾನ್ಯವಾಗಿ ಮಧುಮೇಹದ ಶತ್ರು ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಅದೇ ರೀತಿ ಸಕ್ಕರೆ ನಮ್ಮ ಕೂದಲಿಗೂ ಶತ್ರುವಿದ್ದಂತೆ. ಕೂದಲಿನ ರಚನೆಗೆ ಪ್ರೋಟೀನ್ ಅಗತ್ಯವಿರುತ್ತದೆ, ಸಕ್ಕರೆ ಅದನ್ನು ಹೀರಿಕೊಳ್ಳುವಲ್ಲಿ ತೊಂದರೆಗಳನ್ನು ಸೃಷ್ಟಿಸುತ್ತದೆ. ಅದಕ್ಕಾಗಿಯೇ ಸಕ್ಕರೆಯಿಂದ ತಯಾರಿಸಿದ ವಸ್ತುಗಳನ್ನು ಸೇವಿಸಬೇಡಿ.
ಮದ್ಯ – ಆಲ್ಕೋಹಾಲ್ ನಮ್ಮ ಆರೋಗ್ಯಕ್ಕೆ ಎಂಬುದು ಎಲ್ಲರಿಗೂ ತಿಳಿದಿದೆ. ಇದು ಯಕೃತ್ತು ಸೇರಿದಂತೆ ಅನೇಕ ಅಂಗಗಳನ್ನು ಹಾನಿಗೊಳಿಸುತ್ತದೆ. ಅದೇ ರೀತಿ ಮದ್ಯಪಾನ ಕೂದಲಿನ ಆರೋಗ್ಯವನ್ನೂ ಹಾಳುಮಾಡುತ್ತದೆ. ಆಲ್ಕೋಹಾಲ್ ಸೇವಿಸಿದರೆ ಕೂದಲು ಉದುರುತ್ತದೆ.