ಆಲೋವೆರಾ ಜೆಲ್ ಆರೋಗ್ಯಕ್ಕೆ ತುಂಬಾ ಉತ್ತಮ . ಇದರಲ್ಲಿರುವ ಔಷಧಿಯ ಗುಣಗಳು ಕೆಲವು ಕಾಯಿಲೆಗಳನ್ನು ನಿವಾರಿಸುತ್ತದೆ. ಹಾಗೇ ಇದು ಚರ್ಮ ಮತ್ತು ಕೂದಲಿನ ಆರೋಗ್ಯ ಕಾಪಾಡಲು ಬಹಳ ಸಹಕಾರಿಯಾಗಿದೆ. ಹಾಗಾಗಿ ಅಲೋವೆರಾ ಜೆಲ್ ಬಳಸಿ ಹೇರ್ ಪ್ಯಾಕ್ ತಯಾರಿಸಿ ಕೂದಲಿನ ಹಚ್ಚಿದರೆ ಕೂದಲಿನ ಹಲವು ಸಮಸ್ಯೆಗಳು ನಿವಾರಣೆಯಾಗುತ್ತದೆ. ಹಾಗಾದ್ರೆ ಅದನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
*ಅಲೋವೆರಾ ಜೆಲ್ ಗೆ ½ ಚಮಚ ಆಲಿವ್ ಆಯಿಲ್ ಹಾಗೂ 1 ಮೊಟ್ಟೆಯನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ಇದನ್ನು 2 ಗಂಟೆಗಳ ಕಾಲ ಹಾಗೇ ಇಟ್ಟು ಬಳಿಕ ತಣ್ಣೀರಿನಿಂದ ವಾಶ್ ಮಾಡಿ. ಇದರಿಂದ ನೆತ್ತಿಯೂ ತೇವಾಂಶದಿಂದ ಕೂಡಿರುವುದರ ಜೊತೆಗೆ ಕೂದಲಿಗೆ ಬೇಕಾದ ಪೋಷಕಾಂಶ ದೊರೆತು ಕೂದಲು ಉದ್ದವಾಗಿ ಬೆಳೆಯುತ್ತದೆ.
*ಅಲೋವೆರಾ ಜೆಲ್ ಗೆ ಸ್ವಲ್ಪ ಮೊಸರು ಮತ್ತು ಜೇನುತುಪ್ಪವನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ನಾಲ್ಕು ಗಂಟೆಗಳ ಕಾಲ ಬಿಟ್ಟು ಬಳಿಕ ವಾಶ್ ಮಾಡಿ. ಇದು ನಿಮ್ಮ ಕೂದಲಿಗೆ ಹೊಸ ಜೀವವನ್ನು ನೀಡುತ್ತದೆ. ಮತ್ತು ಕೂದಲಿನ ಬುಡ ಹಾಗೂ ತುದಿಯನ್ನು ಬಲಪಡಿಸುತ್ತದೆ.