ಅಡುಗೆಯಲ್ಲಿ ಶುಂಠಿ ಇದ್ದರೆ ಅದರ ರುಚಿಯೇ ಬೇರೆ. ಶುಂಠಿ ಆಹಾರದ ಸುವಾಸನೆಯನ್ನೂ ಹೆಚ್ಚಿಸುತ್ತದೆ. ಕೇವಲ ಆಹಾರಕ್ಕೊಂದೆ ಅಲ್ಲ ಇದು ಸೌಂದರ್ಯವರ್ಧಕವೂ ಹೌದು. ಉದ್ದ ಹಾಗೂ ದಟ್ಟ ಕೂದಲು ಪಡೆಯೋಕೆ ಆಸೆ ಪಡುವವರು ಶುಂಠಿ ಬಳಸಬೇಕು.
ಶುಂಠಿಯಲ್ಲಿ ಮೆಗ್ನೀಷಿಯಂ, ರಂಜಕ, ಪೊಟ್ಯಾಸಿಯಮ್ ಮತ್ತು ಅನೇಕ ಜೀವಸತ್ವಗಳಿವೆ. ಅವು ಕೂದಲಿನ ಬೇರುಗಳಿಗೆ ಶಕ್ತಿ ನೀಡುವ ಜೊತೆಗೆ ಕೂದಲು ಹೊಳೆಯುವಂತೆ ಮಾಡುತ್ತವೆ.
ಹೊಟ್ಟು ಅನೇಕರ ಸಮಸ್ಯೆ. ಇದರಿಂದ ಕೂದಲು ದುರ್ಬಲವಾಗಿ, ತುರಿಕೆ ಕಾಣಿಸಿಕೊಳ್ಳುವುದಲ್ಲದೆ, ಕೂದಲು ಉದುರುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಹೊಂದಲು, ಎರಡು ಟೀ ಸ್ಪೂನ್ ಆಲಿವ್ ಆಯಿಲ್ ಗೆ ಶುಂಠಿ ರಸವನ್ನು ಬೆರೆಸಿ, ತಲೆಗೆ ಹಚ್ಚಿಕೊಳ್ಳಬೇಕು. ಸುಮಾರು 15-30 ನಿಮಿಷಗಳ ಕಾಲ ಬಿಟ್ಟು ನಂತರ ತಣ್ಣನೆಯ ನೀರಿನಲ್ಲಿ ತಲೆಯನ್ನು ತೊಳೆಯಬೇಕು. ವಾರಕ್ಕೆ ಮೂರು ದಿನ ಹೀಗೆ ಮಾಡಿದರೆ ತಲೆ ಹೊಟ್ಟು ಕಡಿಮೆಯಾಗಿ, ಕೂದಲು ಉದುರುವುದು ಕಡಿಮೆಯಾಗುತ್ತದೆ.