ವಿಟಮಿನ್ ಇ ಸೌಂದರ್ಯ ವೃದ್ಧಿಸಿಕೊಳ್ಳಲು ಬಹಳ ಸಹಕಾರಿ. ಇದು ಚರ್ಮ ಹಾಗೂ ಕೂದಲಿನ ಆರೈಕೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ.
ಅದರಲ್ಲೂ ಕೂದಲಿನ ಬೆಳವಣೆಗೆಗೆ ವಿಟಮಿನ್ಸ್ ಗಳು ಅತಿ ಅವಶ್ಯಕ.
ವಿಟಮಿನ್ ಇ ಕೂದಲನ್ನು ಆರೋಗ್ಯವಾಗಿಡುತ್ತದೆ. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
*ಅಸಮತೋಲನ ಪಿಹೆಚ್ ಮಟ್ಟವು ನೆತ್ತಿಯಲ್ಲಿ ಅತಿಯಾದ ತೈಲ ಉತ್ಪಾದನೆಗೆ ಕಾರಣವಾಗಿದೆ. ಇದರಿಂದ ಕೂದಲು ಉದುರಿಹೋಗುತ್ತದೆ. ಹಾಗಾಗಿ ವಿಟಮಿನ್ ಇ ಪಿಹೆಚ್ ಮಟ್ಟವನ್ನು ಸಮತೋಲನದಲ್ಲಿಡುತ್ತದೆ. ಇದರಿಂದ ಕೂದಲುದುರುವ ಸಮಸ್ಯೆ ನಿವಾರಣೆಯಾಗುತ್ತದೆ.
*ವಿಟಮಿನ್ ಇ ಯನ್ನು ಬಳಸುವುದರಿಂದ ರಕ್ತ ಪರಿಚಲನೆ ಸರಾಗವಾಗಿ ಆಗುತ್ತದೆ. ಇದರಿಂದ ಕೂದಲು ವೇಗವಾಗಿ ಬೆಳವಣಿಗೆ ಹೊಂದುತ್ತದೆ.
*ವಿಟಮಿನ್ ಇ ಕೂದಲನ್ನು ಕಂಡೀಷನರ್ ಮಾಡುವ ಅಂಶವನ್ನು ಹೊಂದಿದೆ. ಇದು ಕೂದಲು ಒಣಗುವುದನ್ನು ತಡೆಯುತ್ತದೆ. ಇದರಿಂದ ಕೂದಲು ನಯವಾಗುತ್ತದೆ.