ಆಲೂಗಡ್ಡೆ ಆರೋಗ್ಯಕ್ಕೆ ಮತ್ತು ಕೂದಲಿಗೆ ಅತ್ಯಂತ ಅವಶ್ಯಕವಾದ ತರಕಾರಿ. ಆಲೂಗಡ್ಡೆ ರಸವು ನೈಸರ್ಗಿಕ ಕೂದಲು ಬೆಳವಣಿಗೆಯ ಟೋನರ್ ಆಗಿ ಕಾರ್ಯನಿರ್ವಹಿಸುತ್ತದೆ. ಆಲೂಗಡ್ಡೆಯ ವಿಶೇಷವೆಂದರೆ ಇದು ಅತ್ಯಂತ ಅಗ್ಗದ ತರಕಾರಿಯಾಗಿದೆ. ಆಲೂಗಡ್ಡೆ ಸಿಪ್ಪೆಯ ಹೇರ್ ಮಾಸ್ಕ್ ಕೂದಲಿನ ಬೆಳವಣಿಗೆಗೆ ಸಹಕಾರಿ.
ಸುಕ್ಕುಗಟ್ಟುವಿಕೆ, ಶುಷ್ಕ ಮತ್ತು ನಿರ್ಜೀವ ಕೂದಲಿನ ಸಮಸ್ಯೆಗಳಿದ್ದರೆ ಆಲೂಗೆಡ್ಡೆ ಸಿಪ್ಪೆಯ ಹೇರ್ ಮಾಸ್ಕ್ ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ. ಇಷ್ಟೇ ಅಲ್ಲ ಬಿಳಿ ಕೂದಲನ್ನು ಕಪ್ಪಾಗಿಸುವಲ್ಲಿ ಆಲೂಗಡ್ಡೆ ಸಿಪ್ಪೆಯು ತುಂಬಾ ಪರಿಣಾಮಕಾರಿಯಾಗಿದೆ.
ಆಲೂಗಡ್ಡೆ ಸಿಪ್ಪೆಯ ಹೇರ್ ಮಾಸ್ಕ್ ಮಾಡಲು ಬೇಕಾಗುವ ಸಾಮಾಗ್ರಿಗಳು- ಆಲೂಗಡ್ಡೆ ಸಿಪ್ಪೆಗಳು 1 ಕಪ್, ಜೇನುತುಪ್ಪ 2 ಟೀಸ್ಪೂನ್, ಅಲೋವೆರಾ ಜೆಲ್ 1 ಟೀಸ್ಪೂನ್
ಆಲೂಗಡ್ಡೆ ಸಿಪ್ಪೆಯ ಹೇರ್ ಮಾಸ್ಕ್ ತಯಾರಿಸುವುದು ಹೇಗೆ ?
ಆಲೂಗಡ್ಡೆ ಸಿಪ್ಪೆಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಸಿಡಿ. ನಂತರ ಮತ್ತೊಮ್ಮೆ ಅದನ್ನು ತೊಳೆದುಕೊಂಡು ಒಂದು ಪಾತ್ರೆಯಲ್ಲಿ ಕುದಿಸಿ. ಸುಮಾರು 10 ನಿಮಿಷಗಳ ನಂತರ, ನೀರಿನಿಂದ ಸಿಪ್ಪೆಗಳನ್ನು ತೆಗೆದುಹಾಕಿ. ಈ ಸಿಪ್ಪೆಗಳನ್ನು ಚೆನ್ನಾಗಿ ಮ್ಯಾಶ್ ಮಾಡಿ. ನಂತರ ಅದಕ್ಕೆ ಜೇನುತುಪ್ಪ ಮತ್ತು ಅಲೋವೆರಾ ಜೆಲ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಆಲೂಗಡ್ಡೆ ಸಿಪ್ಪೆಯ ಹೇರ್ ಮಾಸ್ಕ್ ಸಿದ್ಧವಾಗುತ್ತದೆ.
ಬ್ರಷ್ ಸಹಾಯದಿಂದ ಆಲೂಗಡ್ಡೆ ಸಿಪ್ಪೆಯ ಹೇರ್ ಮಾಸ್ಕ್ ಅನ್ನು ಕೂದಲಿನ ಬೇರುಗಳಿಗೂ ಚೆನ್ನಾಗಿ ಅಪ್ಲೈ ಮಾಡಿ. ನಂತರ ಅರ್ಧ ಘಂಟೆಯವರೆಗೆ ಅದನ್ನು ಒಣಗಲು ಬಿಡಿ. ಬಳಿಕ ಶಾಂಪೂ ಮತ್ತು ಕಂಡಿಷನರ್‌ನಿಂದ ಕೂದಲನ್ನು ತೊಳೆದು ಸ್ವಚ್ಛಗೊಳಿಸಿ. ಈ ರೀತಿ ಮಾಡುವುದರಿಂದ ಕೂದಲಿಗೆ ಹೊಳಪು ಕೂಡ ಬರುತ್ತದೆ.