ಹೆಚ್ಚಿನವರು ಮುಖದ ಸೌಂದರ್ಯದ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ ಕೂದಲಿನ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇದರಿಂದ ಕೂದಲಿಗೆ ಸರಿಯಾದ ಪೋಷಕಾಂಶಗಳು ಸಿಗದೆ ಕೂದಲಿನ ಸಮಸ್ಯೆಗಳು ಕಾಡುತ್ತದೆ.
ಹಾಗಾಗಿ ಕೂದಲಿನ ಆರೋಗ್ಯ ಕಾಪಾಡಲು ಈ ಬೀಜಗಳನ್ನು ನಿತ್ಯ ನಿಮ್ಮ ಆಹಾರದಲ್ಲಿ ಬಳಸಿ.
*ಎಳ್ಳು : ಇದು ಕೂದಲಿನ ಬೆಳವಣೆಗೆ ಸಹಕಾರಿ. ಇದನ್ನು ಬಳಸುವುದರಿಂದ ಕೂದಲುದುರುವ ಸಮಸ್ಯೆ ದೂರವಾಗಿ ಕೂದಲು ದಪ್ಪವಾಗಿ, ಉದ್ದವಾಗಿ ಬೆಳೆಯುತ್ತದೆ.
*ಸೂರ್ಯಕಾಂತಿ ಬೀಜ : ಈ ಬೀಜಗಳು ಕೂಡ ಕೂದಲಿನ ಆರೋಗ್ಯವನ್ನು ಕಾಪಾಡುತ್ತವೆ. ಇದು ಕೂದಲಿನ ಬುಡವನ್ನು ಗಟ್ಟಿಯಾಗಿಸಿ ಕೂದಲುದುರುವ ಸಮಸ್ಯೆಯನ್ನು ನಿವಾರಿಸುತ್ತದೆ.
*ಕುಂಬಳಕಾಯಿ ಬೀಜ : ಇದರಲ್ಲಿ ಸತು, ತಾಮ್ರ, ಮೆಗ್ನೀಶಿಯಂ, ಕಬ್ಬಿಣ, ವಿಟಮಿನ್ ಎ, ಬಿ ಮತ್ತು ಸಿ ಸಮೃದ್ಧವಾಗಿದೆ. ಇವು ಕೂದಲನ್ನು ಬಲಪಡಿಸುತ್ತವೆ.
*ಅಗಸೆ ಬೀಜ : ಇದರಲ್ಲಿ ಸಾಕಷ್ಟು ಫೈಬರ್, ಪ್ರೋಟೀನ್, ಮೆಗ್ನೀಶಿಯಂ ಮತ್ತು ರಂಜಕವಿದೆ. ಇದು ಕೂದಲುದುರುವ ಸಮಸ್ಯೆಗೆ ರಾಮಬಾಣವಾಗಿದೆ.
*ಮೆಂತ್ಯಕಾಳು : ಇದು ಕೂದಲಿನ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಇದು ಕೂದಲುದುರುವ ಸಮಸ್ಯೆ ದೂರವಾಗಿಸಿ, ದಪ್ಪವಾದ, ಕಪ್ಪಾದ ಕೂದಲು ಬೆಳೆಯಲು ಸಹಕಾರಿಯಾಗಿದೆ.