* ತಲೆ ಹೊಟ್ಟು ನಿವಾರಣೆಗೆ, 1 ಚಮಚ ಆಲಿವ್ ಆಯಿಲ್, 1 ಚಮಚ ಕೊಬ್ಬರಿ ಎಣ್ಣೆ ಎರಡನ್ನೂ ಮಿಕ್ಸ್ ಮಾಡಿ. ಅದಕ್ಕೆ ಸ್ವಲ್ಪ ನಿಂಬೆರಸ ಸೇರಿಸಿ ತಲೆ ಬುಡಕ್ಕೆ ಚೆನ್ನಾಗಿ ಹಚ್ಚಿ. 20-30 ನಿಮಿಷ ಬಿಟ್ಟು ಶ್ಯಾಂಪೂ ಮತ್ತು ಕಂಡೀಷನರ್ ಬಳಸಿ ಕೂದಲನ್ನು ತೊಳೆಯಿರಿ. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿ.
* ಚಳಿಗಾಲದಲ್ಲಿ ಹೆಚ್ಚು ಬಿಸಿ ನೀರಿನಿಂದ ಕೂದಲು ತೊಳೆಯುವ ಬದಲು ಉಗುರು ಬೆಚ್ಚಗಿನ ನೀರಿನಿಂದ ತೊಳೆದರೆ, ರಕ್ತ ಸಂಚಾರ ಚೆನ್ನಾಗಿ ಆಗುವುದು. ಹಾಗೇ ಕೂದಲಿಗೂ ಒಳ್ಳೆಯದು.
* ಕೂದಲು ಸೊಂಪಾಗಿ ಕಾಣಬೇಕಂದ್ರೆ ಕೂದಲಿಗೆ ಜೇನು ಹಚ್ಚಿ ಟವಲ್ ಸುತ್ತಿ. ಅರ್ಧ ಗಂಟೆಯ ಬಳಿಕ ಹದವಾದ ಬಿಸಿ ನೀರಿನಿಂದ ಕೂದಲನ್ನು ಸ್ವಚ್ಛಗೊಳಿಸಿ. ಹೀಗೆ ಮಾಡಿದರೆ ಕೂದಲು ಸೊಂಪಾಗಿ ಕಾಣುವುದು.
* ಡ್ರೈಯರ್ ಬಳಸಿ ಕೂದಲು ಒಣಗಿಸುವುದಾದರೆ ಡ್ರೈಯರ್ ಅನ್ನು 15 ಸೆಂಟಿಮೀಟರ್ ದೂರ ಹಿಡಿಯಿರಿ. ಡ್ರೈಯರ್ ಬದಲು ಬಿಸಿಲಿನಲ್ಲಿ ಕೂದಲು ಒಣಗಿಸಿದರೆ ಇನ್ನೂ ಒಳ್ಳೆಯದು.
* ಕಂಡೀಷನರ್ ಹಚ್ಚಿ 1-2 ನಿಮಿಷ ಬಿಡಿ, ನಂತರ ಕೂದಲನ್ನು ನೀರಿನಿಂದ ತೊಳೆಯಿರಿ. ಇದರಿಂದ ಕೂದಲು ನುಣಪಾಗುವುದು.