
ಅಲೋವೆರಾ ಜೆಲ್ ಅನ್ನು ಚರ್ಮದ ಆರೋಗ್ಯ ಕಾಪಾಡಲು ಹಲವಾರು ಬಾರಿ ಬಳಸುತ್ತೀರಿ. ಆದರೆ ಈ ಅಲೋವೆರಾವನ್ನು ಕೂದಲಿನ ಸೌಂದರ್ಯ ವೃದ್ಧಿಸಲು ಕೂಡ ಬಳಸಬಹುದು. ಕೂದಲನ್ನು ನೇರಗೊಳಿಸಲು ಅಲೋವೆರಾ ಜೆಲ್ ಗೆ ಇವುಗಳನ್ನು ಮಿಕ್ಸ್ ಮಾಡಿ ಹಚ್ಚಿ.
1 ಕಪ್ ಅಲೋವೆರಾ ಜೆಲ್, ½ ಕಪ್ ಜೇನುತುಪ್ಪ, 1 ಚಮಚ ತೆಂಗಿನೆಣ್ಣೆ , 1 ಚಮಚ ನಿಂಬೆ ರಸ ಇವಿಷ್ಟನ್ನು ತೆಗೆದುಕೊಳ್ಳಿ. ಮೊದಲಿಗೆ ಅಲೋವೆರಾ ಜೆಲ್ ಮತ್ತು ಜೇನುತುಪ್ಪ ವನ್ನು ಮಿಕ್ಸ್ ಮಾಡಿ. ಬಳಿಕ ಅದಕ್ಕೆ ನಿಂಬೆ ರಸ ಮತ್ತು ತೆಂಗಿನೆಣ್ಣೆಯನ್ನು ಮಿಶ್ರಣ ಮಾಡಿ ಪ್ಯಾಕ್ ತಯಾರಿಸಿಕೊಳ್ಳಿ.
ಇದನ್ನು ಕೂದಲನ್ನು ವಿಭಜಿಸಿಕೊಂಡು ಸ್ವಲ್ಪ ಸ್ವಲ್ಪ ಕೂದಲಿಗೆ ಹಚ್ಚಿ ಕೈಗಳಿಂದ ಮಸಾಜ್ ಮಾಡಿ. ಬಳಿಕ ಇದನ್ನು 1 ಗಂಟೆಗಳ ಕಾಲ ಹಾಗೇ ಬಿಟ್ಟು ಶಾಂಪು ಬಳಸಿ ವಾಶ್ ಮಾಡಿ. ಇದನ್ನು ವಾರಕ್ಕೆ 1 ಬಾರಿ ಕೂದಲಿಗೆ ಹಚ್ಚಿ. ಹಾಗೇ ಇದನ್ನು ಹಲವು ಬಾರಿ ಬಳಸಿದ ಬಳಿಕ ಫಲಿತಾಂಶ ಕಾಣಿಸುತ್ತದೆ.