ನಿಮಗೆ ಈಗಾಗಲೇ ತಿಳಿದಿರುವಂತೆ, ಇತರ ಕುಸ್ತಿ ಪಂದ್ಯಾವಳಿಗಳಿಗಿಂತ ಭಿನ್ನವಾಗಿ, ಡಬ್ಲ್ಯೂಡಬ್ಲ್ಯೂಇ ಪ್ರದರ್ಶನಗಳು ಕಾನೂನುಬದ್ಧ ಸ್ಪರ್ಧೆಗಳಲ್ಲ. ಆದರೆ, ಮನರಂಜನೆ ಆಧಾರಿತ ಪ್ರದರ್ಶನ, ಸ್ಕ್ರಿಪ್ಟ್ ಮತ್ತು ಭಾಗಶಃ ನೃತ್ಯ ಸಂಯೋಜನೆಯ ಪಂದ್ಯಗಳನ್ನು ಒಳಗೊಂಡಿರುತ್ತದೆ. ದಿ ಗ್ರೇಟ್ ಖಲಿಯಂತಹ ಕುಸ್ತಿಪಟುಗಳ ನಡುವೆ ರಿಂಗ್ನಲ್ಲಿ ನಡೆಯುತ್ತಿರುವ ಆಘಾತಕಾರಿ ಘಟನೆಗಳು, ವಾದಗಳು ಮತ್ತು ಜಗಳಗಳನ್ನು ನೀವು ಡಬ್ಲ್ಯೂಡಬ್ಲ್ಯೂಇ ನಲ್ಲಿ ವೀಕ್ಷಿಸಿರಬಹುದು.
ಮಾಜಿ ಡಬ್ಲ್ಯೂಡಬ್ಲ್ಯೂಇ ವರ್ಲ್ಡ್ ಹೆವಿವೇಟ್ ಚಾಂಪಿಯನ್ ಖಲಿ ಅವರು ಪಂಜಾಬ್ನಲ್ಲಿ ಕಾಂಟಿನೆಂಟಲ್ ವ್ರೆಸ್ಲಿಂಗ್ ಎಂಟರ್ಟೈನ್ಮೆಂಟ್ ಎಂಬ ಕುಸ್ತಿ ಪ್ರಚಾರ ಮತ್ತು ತರಬೇತಿ ಅಕಾಡೆಮಿಯನ್ನು ಹೊಂದಿದ್ದಾರೆ. ಇದೀಗ ಖಲಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸರಣಿ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಸಿಡಬ್ಲ್ಯೂಇ ವ್ರೆಸ್ಲಿಂಗ್ ಅಕಾಡೆಮಿಯಲ್ಲಿ ನಡೆದ ಪಂದ್ಯದ ಘಟನೆಯನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ನೀವು ನೋಡಿರದ ಅತ್ಯಂತ ನಾಟಕೀಯ ಕುಸ್ತಿ ಪಂದ್ಯ ನಡೆದಿದೆ. ಪಂದ್ಯದಲ್ಲಿ ನಡೆದ ಘಟನೆ ಸಂಪೂರ್ಣ ಸ್ಕ್ರಿಪ್ಟ್ ಎಂದು ನೆಟ್ಟಿಗರು ಹೇಳಿದ್ದಾರೆ. ಅದೇನೇ ಇದ್ದರೂ, ಪಂದ್ಯವು ಹೆಚ್ಚು ಮನರಂಜನೆಯಾಗಿ ಹೊರಹೊಮ್ಮಿದ್ದು, ಅದರ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಕ್ರೇಜಿ ವೈರಲ್ ಆಗುತ್ತಿವೆ.
ಕಳ್ಳತನ ನಿರೋಧಕ ಇ-ಬೈಕ್ ಅಭಿವೃದ್ಧಿಪಡಿಸಿದ ಯುವಕ
ಇಬ್ಬರು ಮಹಿಳಾ ಕುಸ್ತಿಪಟುಗಳು (ಒಬ್ಬರು ಹೊಳೆಯುವ ನೀಲಿ ಉಡುಪು, ಇನ್ನೊಬ್ಬರು ಕೆಂಪು ಬಣ್ಣದ ಉಡುಪಿನಲ್ಲಿ) ಸಿಡಬ್ಲ್ಯೂಇ ಅಕಾಡೆಮಿಯ ಕುಸ್ತಿ ರಿಂಗ್ನಲ್ಲಿ ಹೋರಾಡುತ್ತಿದ್ದಾರೆ. ಈ ವೇಳೆ ಪಂದ್ಯವನ್ನು ವೀಕ್ಷಿಸುತ್ತಿರುವ ಜನರ ಮಧ್ಯದಲ್ಲಿ, ಕಪ್ಪು ಮತ್ತು ಬಿಳಿ ಸಲ್ವಾರ್ ಸೂಟ್ನಲ್ಲಿ ಯುವತಿಯೊಬ್ಬಳು ಕಾಣಿಸಿಕೊಂಡಿದ್ದಾಳೆ.
ಕೋಪೋದ್ರಿಕ್ತಳಾದ ಯುವತಿ ರೇಲಿಂಗ್ ಅನ್ನು ಹಾರಿ ಕುಸ್ತಿ ಮೈದಾನಕ್ಕೆ ಜಿಗಿದಿದ್ದಾಳೆ. ಇಬ್ಬರು ತೀರ್ಪುಗಾರರು ಆಕೆಯನ್ನು ಪ್ರಶ್ನಿಸಿದ್ದಾರೆ. ಆದರೆ, ಇದಕ್ಕೆ ಕ್ಯಾರೆ ಎನ್ನದ ಯುವತಿ ಇಬ್ಬರು ಮಹಿಳಾ ಕುಸ್ತಿಪಟುಗಳ ಮೇಲೆ ಪಂಚ್ ಕೊಟ್ಟು ಕೆಳಕ್ಕೆ ಬೀಳಿಸಿದ್ದಾಳೆ. ಅಲ್ಲದೆ ಒಬ್ಬ ರೆಫರಿಗೂ ಕೂಡ ಒದೆ ನೀಡಿದ್ದಾಳೆ.
ಅಷ್ಟೇ ಅಲ್ಲ ಪ್ರೇಕ್ಷಕರಲ್ಲಿ ಯಾರಾದರೂ ತನ್ನೊಂದಿಗೆ ಹೋರಾಡುವಂತೆ ಸವಾಲು ಹಾಕಿದ್ದಾಳೆ. ನಂತರ ವ್ಯಕ್ತಿಯೊಬ್ಬ ರಿಂಗ್ ಬಳಿ ಹೋಗಲು ಧೈರ್ಯ ಮಾಡಿ, ಆಕೆಯನ್ನು ಎತ್ತಿಕೊಂಡು ಹೋಗಿದ್ದಾನೆ. ಈ ನಾಟಕೀಯ ವಿಡಿಯೋ ಇದೀಗ ವೈರಲ್ ಆಗಿದೆ.