2 ವರ್ಷಗಳ ಹಿಂದೆ ದೇಶಕ್ಕೆ ಮಹಾಮಾರಿಯಾಗಿ ವಕ್ಕರಿಸಿಕೊಂಡಿದ್ದ ಕೊರೊನಾ ಇಂದಿಗೂ ತನ್ನ ಅಟ್ಟಹಾಸ ಮೆರೆಯುತ್ತಿದೆ. ಆದರೆ ಇದರ ಅಬ್ಬರ ಕಡಿಮೆಯಾಗಿರುವ ಕಾರಣ ಬಹುತೇಕ ಎಲ್ಲ ಚಟುವಟಿಕೆಗಳು ಆರಂಭವಾಗಿವೆ.
ಕೊರೊನಾದಿಂದ ಅತಿಹೆಚ್ಚು ನಲುಗಿದ್ದು ಶೈಕ್ಷಣಿಕ ಕ್ಷೇತ್ರ. ಭೌತಿಕ ತರಗತಿಗಳಿಲ್ಲದೆ ವಿದ್ಯಾರ್ಥಿಗಳು ಆನ್ ಲೈನ್ ಮೂಲಕವೇ ಶಿಕ್ಷಣ ಪಡೆದಿದ್ದರು. ಇದೀಗ ಕೊರೊನಾ ಆರ್ಭಟ ಕಡಿಮೆಯಾಗಿರುವ ಕಾರಣ ಶೈಕ್ಷಣಿಕ ಚಟುವಟಿಕೆಗಳು ಈ ಮೊದಲಿನಂತೆ ನಡೆಯುತ್ತಿವೆ.
ಹೀಗಾಗಿ ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವ ಜೂನ್ 16ರಂದು ನಡೆಯುತ್ತಿದ್ದು, ಈ ಬಾರಿ ಒಂದೇ ದಿನ ಎರಡು ಘಟಿಕೋತ್ಸವಗಳು ನಡೆಯುತ್ತಿರುವುದು ವಿಶೇಷ. ಹೌದು, ಕೊರೊನಾ ಕಾರಣಕ್ಕೆ 2019-20 ರಲ್ಲಿ ಘಟಿಕೋತ್ಸವ ನಡೆದಿರಲಿಲ್ಲ. ಹೀಗಾಗಿ ಒಂದೇ ದಿನ ಎರಡು ಘಟಿಕೋತ್ಸವ ಮಾಡಿ ಪದವಿ ಪ್ರದಾನ ಮಾಡಲಾಗುತ್ತಿದೆ.