ಬೆಂಗಳೂರು: ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿದ್ದು, ಇದೀಗ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಪಿ.ಯೋಗೇಶ್ವರ್, ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ರಾಸಲೀಲೆ ಆಡಿಕೊಂಡಿದ್ದರು. ಕುಮಾರಸ್ವಾಮಿಯವರ ಬಗ್ಗೆ ಇಡೀ ರಾಜ್ಯಕ್ಕೆ ಗೊತ್ತಿದೆ. ಅವರ ಬಗ್ಗೆ ನಾನು ಹೊಸದಾಗಿ ಹೇಳಬೇಕಿಲ್ಲ ಎಂದು ಕಿಡಿಕಾರಿದ್ದಾರೆ.
BIG NEWS: ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವ್ಯವಸ್ಥೆ; ಸಚಿವ ಡಾ.ಸುಧಾಕರ್ ಭರವಸೆ
ಹೆಚ್.ಡಿ. ಕುಮಾರಸ್ವಾಮಿ 14 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ರಾಸಲೀಲೆ ಆಡಿಕೊಂಡಿದ್ದರು. ಸಿಎಂ ಆಗಿ ಅವರು ಮಾಡಿದ ಸಾಧನೆಯೇನು? ಮುಖ್ಯಮಂತ್ರಿಯಾಗಿದ್ದಾಗ ಒಂದೇ ಒಂದು ದಿನ ಚನ್ನಪಟ್ಟಣ ಕ್ಷೇತ್ರಕ್ಕೆ ಬಂದು ಜನರ ಸಮಸ್ಯೆ ಆಲಿಸಿಲ್ಲ. ಈಗ ಚನ್ನಪಟ್ಟಣಕ್ಕೆ ಬಂದು ಕಣ್ಣೀರ ನಾಟಕವಾಡಿದರೆ ಏನು ಪ್ರಯೋಜನ? ಎಂದು ಹಿಗ್ಗಾ ಮುಗ್ಗಾ ಆರೋಪ ಮಾಡಿದ್ದಾರೆ.
ರಾಸಲೀಲೆ ಬಗ್ಗೆ ಕುಮಾರಸ್ವಾಮಿಯವರನ್ನೇ ಕೇಳಿ ನೋಡಿ. ನನ್ನಿಂದ ಯಾಕೆ ಹೆಚ್ ಡಿ ಕೆ ಬಗ್ಗೆ ಅಣಿಮುತ್ತು ಕೇಳ್ತೀರಾ? ನೇರಾ ನೇರ ಅವರನ್ನು ನನ್ನ ಮುಂದೆ ಕೂರಿಸಿದರೆ ಮಾತನಾಡೋಣ. ಕುಮಾರಸ್ವಾಮಿ ಬಹಿರಂಗ ಚರ್ಚೆಗೆ ಬರಲಿ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.