
ಆಪ್ಟಿಕಲ್ ಭ್ರಮೆಯನ್ನು ಇದು ಯಾವ ರೀತಿಯಲ್ಲಿ ತಿರುಗುತ್ತಿದೆ? ಎಂಬುದನ್ನು ಗುರುತಿಸಬಲ್ಲಿರಾ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಪ್ರಶ್ನೆಯು ಸರಳವಾಗಿ ಕಾಣಿಸಬಹುದು. ಆದರೆ, ನೀವು ತಿರುಗುವ ಕುದುರೆಯ ಆಪ್ಟಿಕಲ್ ವಿಡಿಯೋ ನೋಡಿದರೆ, ಅರೆಕ್ಷಣ ನಿಮಗೆ ತಲೆತಿರುಗಬಹುದು.
ಕುದುರೆ ಯಾವ ದಾರಿಯಲ್ಲಿ ಸಾಗುತ್ತಿದೆ ?
ಬಹುಶಃ ನೀವು ಮೊದಲಿಗೆ, ಕುದುರೆಯು ಪ್ರದಕ್ಷಿಣಾಕಾರವಾಗಿ ಚಲಿಸುವುದನ್ನು ಗಮನಿಸಬಹುದು. ಆದರೆ, ನಂತರ ಅರ್ಧದಾರಿಯಲ್ಲೇ ದಿಕ್ಕನ್ನು ಬದಲಾಯಿಸುವಂತೆ ತೋರುತ್ತಿದೆ ಅಲ್ಲವೇ..?
ನೆಟ್ಟಿಗರಂತೂ ಆಪ್ಟಿಕಲ್ ವಿಡಿಯೋ ನೋಡಿ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ. ಕುದುರೆ ಯಾವ ದಿಕ್ಕಿಗೆ ತಿರುಗುತ್ತಿದೆ ಅಂತಾ ಚರ್ಚೆ ನಡೆಸಿದ್ದಾರೆ. ಇದು ಬದಲಾಗುತ್ತಲೇ ಇದೆ ಅಂತಾ ಬಳಕೆದಾರರೊಬ್ಬರು ಹೇಳಿದ್ರೆ, ಮತ್ತೊಬ್ಬರು ಇದು ಹಾವಿನಂತೆ ಸುತ್ತುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ನರ್ತಕಿಯೊಬ್ಬರ ಇದೇ ರೀತಿಯ ಆಪ್ಟಿಕಲ್ ಭ್ರಮೆ ವೈರಲ್ ಆಗಿತ್ತು.