ಆಲೂಗಡ್ಡೆ ಬೇಯಿಸುವಾಗ ಅನೇಕ ಮಹಿಳೆಯರನ್ನು ಕಾಡುವ ಸಮಸ್ಯೆ ಇದು. ಕುದಿಯುವಾಗ ಆಲೂಗಡ್ಡೆ ಒಡೆದು ಹೋಗುತ್ತದೆ. ಇದ್ರಿಂದ ಆಲೂಗಡ್ಡೆ ಒಳಗೆ ನೀರು ಸೇರುತ್ತದೆ ಎಂಬುದು. ಆದ್ರೆ ನಾವು ಹೇಳುವ ಟಿಪ್ಸ್ ಅನುಸರಿಸಿದ್ರೆ ಆಲೂಗಡ್ಡೆಯನ್ನು ಒಡೆಯದೆ ಬೇಯಿಸಬಹುದು.
ನಾಲ್ಕೈದು ಆಲೂಗಡ್ಡೆಯನ್ನು ಬೇಯಿಸುವಾಗ ತುಂಬಾ ನೀರು ಹಾಕುವ ಅವಶ್ಯಕತೆಯಿಲ್ಲ.
ಆಲೂಗಡ್ಡೆ ನೀರಿನಲ್ಲಿ ಮುಳುಗುವಷ್ಟು ನೀರನ್ನು ಮಾತ್ರ ಹಾಕಿ.
ಆಲೂಗಡ್ಡೆ ಬೇಯಿಸುವ ನೀರಿಗೆ ಚಿಟಕಿ ಉಪ್ಪನ್ನು ಹಾಕಿ. ಇದ್ರಿಂದ ಆಲೂಗಡ್ಡೆ ಒಡೆಯುವುದಿಲ್ಲ. ಜೊತೆಗೆ ಮೃದುವಾಗಿ ಬೇಯುತ್ತದೆ. ಉಪ್ಪಿನ ಜೊತೆಗೆ ಎಣ್ಣೆ ಹಾಕುವುದು ಮತ್ತೂ ಉತ್ತಮ.
ಮನೆಯಲ್ಲಿ ವಿನೆಗರ್ ಇದ್ರೆ ಅದನ್ನು ಬಳಸಬಹುದು. ವಿನೆಗರ್ ಹಾಕುವುದ್ರಿಂದ ಆಲೂಗಡ್ಡೆ ಬಿರುಕು ಬಿಡುವುದಿಲ್ಲ.