ನಮ್ಮ ದೇಹದಲ್ಲಿ ಕುತ್ತಿಗೆಯೂ ಬಹು ಮುಖ್ಯವಾದ ಅಂಗ. ಕೆಲವೊಂದು ಕಾರಣಗಳಿಂದ ಕುತ್ತಿಗೆ ನೋವು ಪದೇ ಪದೇ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಮನೆಯಲ್ಲಿ ಮದ್ದು ತಯಾರಿಸಬಹುದು.
ಕುತ್ತಿಗೆ ನೋವು ಇರುವವರು ಎರಡು ಗಂಟೆಗೊಮ್ಮೆ ಐಸ್ ಪ್ಯಾಕ್ ಇಟ್ಟುಕೊಳ್ಳಬಹುದು. ಇದರಿಂದ ನೋವು ನಿವಾರಣೆಯಾಗುತ್ತದೆ.
ದಿನನಿತ್ಯ ಕುತ್ತಿಗೆ ವ್ಯಾಯಾಮ ಮಾಡುವುದರಿಂದ ಕುತ್ತಿಗೆ ನೋವಿನ ಸಮಸ್ಯೆಯಿಂದ ದೂರವಿರಬಹುದು. ಒಂದು ಲೋಟ ಹಾಲಿಗೆ ಒಂದು ಚಮಚ ಅರಿಷಿಣ ಪುಡಿ ಸೇರಿಸಿ ಅದನ್ನು ಬಿಸಿ ಮಾಡಿ ನಂತರ ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಮತ್ತು ದಿನಕ್ಕೆ ಎರಡು ಸಾರಿ ಈ ಮಿಶ್ರಣವನ್ನು ಕುಡಿಯುವುದು ಒಳ್ಳೆಯದು.
ಕುತ್ತಿಗೆ ಮತ್ತು ಭುಜದ ಮೇಲೆ ಲ್ಯಾವೆಂಡರ್ ಎಣ್ಣೆಯನ್ನು ಹಾಕಿ 10 ನಿಮಿಷ ಮಸಾಜ್ ಮಾಡಿದರೆ ನೋವು ಕಡಿಮೆಯಾಗುತ್ತದೆ. ಶುಂಠಿ ಚಹಾ ಕುಡಿಯುವುದರಿಂದ ಕುತ್ತಿಗೆಯ ಭಾಗಕ್ಕೆ ಹಿತವಾದ ಅನುಭವವಾಗುತ್ತದೆ.
ಆಪಲ್ ಸೈಡರ್ ವಿನೆಗರ್ ಲ್ಲಿ ಕರವಸ್ತ್ರ ನೆನಸಿ ಕುತ್ತಿಗೆಯ ನೋವಿನ ಭಾಗದಲ್ಲಿ 2 ಗಂಟೆ ಕಾಲ ಬಿಡಬೇಕು. ಹೀಗೆ ದಿನಕ್ಕೆರಡು ಬಾರಿ ಮಾಡುವುದರಿಂದ ಕುತ್ತಿಗೆ ನೋವಿಗೆ ಪರಿಹಾರ ಕಂಡುಕೊಳ್ಳಬಹುದು.