/GettyImages-501674400-58ed7b765f9b582c4db51c93.jpg)
ಕುತ್ತಿಗೆ ದೇಹದ ಅತ್ಯಂತ ಕೋಮಲ ಭಾಗವಾಗಿದೆ. ತಲೆ ಬಗ್ಗಿಸಿ ಕೆಲಸ ಮಾಡುವುದ್ರಿಂದ, ಒಂದೇ ಭಂಗಿಯಲ್ಲಿ ತುಂಬಾ ಹೊತ್ತು ಕೆಲಸ ಮಾಡಿದ್ರೆ, ಕಂಪ್ಯೂಟರ್ ಕೆಲಸ ಮಾಡುವವರಿಗೆ ಕುತ್ತಿಗೆ ನೋವು ಕಾಡುವುದು ಸಾಮಾನ್ಯ. ಕಣ್ಣಿಗೆ ಕಾಣದ ಈ ನೋವು ಯಮಯಾತನ ನೀಡುತ್ತದೆ.
ಮಸಾಜ್ ಮೂಲಕ ಈ ನೋವನ್ನು ಶಮನ ಮಾಡಬಹುದು. ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಆಯಿಲ್ ಆಗಿ ಉಪಯೋಗಿಸಿ ಲಾಭ ಪಡೆಯಬಹುದಾಗಿದೆ.
ಆಲಿವ್ ಆಯಿಲ್ ಉಪಯುಕ್ತಕಾರಿ. ನೋವನ್ನು ನೈಸರ್ಗಿಕ ವಿಧಾನದ ಮೂಲಕ ಇದು ಕಡಿಮೆ ಮಾಡುತ್ತದೆ. ದಿನದಲ್ಲಿ ಎರಡು ಬಾರಿ ಆಲಿವ್ ಆಯಿಲ್ ನಿಂದ ಕುತ್ತಿಗೆಯನ್ನು ಮಸಾಜ್ ಮಾಡಬಹುದು. ಉಪ್ಪು ಕೂಡ ನೋವು ನಿವಾರಕ ಕೆಲಸ ಮಾಡುತ್ತದೆ. ಉಪ್ಪು ಹಾಗೂ ಆಲಿವ್ ಆಯಿಲ್ ಬೆರೆಸಿ ಮಾಡಿದ ನೈಸರ್ಗಿಕ ತೈಲ ನೋವು ನಿವಾರಣೆಗೆ ಹೇಳಿ ಮಾಡಿಸಿದ ಔಷಧಿ.
ತೈಲ ಮಾಡಲು ಬೇಕಾಗುವ ಪದಾರ್ಥ
ಉಪ್ಪು -5 ದೊಡ್ಡ ಚಮಚ
ಆಲಿವ್ ಆಯಿಲ್ : 10 ದೊಡ್ಡ ಚಮಚ
ಗಾಜಿನ ಪಾತ್ರೆ -1
ಬಳಸುವ ವಿಧಾನ :
ಗಾಜಿನ ಪಾತ್ರೆಯಲ್ಲಿ ಆಲಿವ್ ಆಯಿಲ್ ಹಾಗೂ ಉಪ್ಪನ್ನು ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿಡಿ. ಅದು ಸ್ವಲ್ಪ ದಪ್ಪಗಾದ ಮೇಲೆ ಸ್ವಲ್ಪ ಎಣ್ಣೆಯನ್ನು ಕುತ್ತಿಗೆಗೆ ಹಚ್ಚಿ ಮಸಾಜ್ ಮಾಡಿ. ರಕ್ತ ಸಂಚಲನ ಸುಲಭವಾಗುವುದ್ರಿಂದ ಸ್ನಾಯುಗಳ ಒತ್ತಡ ಕಡಿಮೆಯಾಗುತ್ತದೆ. ದಿನದಲ್ಲಿ ಎರಡು ಬಾರಿ ಈ ತೈಲದಿಂದ ಮಸಾಜ್ ಮಾಡಿದಲ್ಲಿ ನೋವು ಬಹುಬೇಗ ಕಡಿಮೆಯಾಗುತ್ತದೆ.