ಬೆಂಗಳೂರು: ಹಿಂದೆ 60 ವರ್ಷ ಮೇಲ್ಪಟ್ಟವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಕುತ್ತಿಗೆ ನೋವಿನ ಸಮಸ್ಯೆ ಇಂದು ಕಿರಿ ವಯಸ್ಸಿನವರಲ್ಲಿ, 20 ವರ್ಷದ ಯುವಕ-ಯುವತಿಯರಲ್ಲಿ, ವಿದ್ಯಾರ್ಥಿಗಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಕುತ್ತಿಗೆ ನೋವಿಗೆ ಕಾರಣವೇನು ? ಶಾಶ್ವತ ಪರಿಹಾರವೇನು ? ಎಂಬ ಬಗ್ಗೆ ಮಹತ್ವದ ಮಾಹಿತಿಯನ್ನು ಡಾ. ರಾಜು ತಮ್ಮ ಹೊಸ ವಿಡಿಯೋದಲ್ಲಿ ತಿಳಿಸಿದ್ದಾರೆ.
ನಮ್ಮ ಮೆದುಳಿಗೂ, ಬೆನ್ನುಹುರಿಗೂ, ಕುತ್ತಿಗೆ ಭಾಗದಲ್ಲಿರುವ ಎಲುಬಿಗೂ ಇರುವ ಸಂಬಂಧವೇನು ? ನಮ್ಮಲ್ಲಿ ಕತ್ತು ನೋವಿಗೆ ಕಾರಣವಾಗುವ ಅಂಶಗಳಾದರೂ ಯಾವುದು ? ಯಾವೆಲ್ಲ ನಿಯಮಿತವಾದ ವ್ಯಾಯಾಮಗಳಿಂದ ಕುತ್ತಿಗೆ ನೋವನ್ನು ಪರಿಹರಿಸಿಕೊಳ್ಳಬಹುದು ಎಂಬ ಬಗ್ಗೆ ಸಲಹೆಗಳನ್ನು ಡಾ. ರಾಜು ನೀಡಿದ್ದಾರೆ. ಈ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.