ಬೆಂಗಳೂರು: ಖಾತೆ ಬದಲಾವಣೆಗೆ ಪಟ್ಟು ಹಿಡಿದಿರುವ ಸಚಿವ ಆನಂದ್ ಸಿಂಗ್ ಆ. 15ರ ಗಡುವು ನೀಡಿದ್ದು, ಬಳಿಕ ತಮ್ಮ ಮುಂದಿನ ನಡೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯೇ ರಾಜೀನಾಮೆ ನೀಡಲಿದ್ದಾರಾ ಎಂಬ ಕುತೂಹಲ ಮೂಡುತ್ತಿದೆ.
ತಮಗೆ ನೀಡಿರುವ ಪ್ರವಾಸೋದ್ಯಮ ಖಾತೆ ಬದಲಾವಣೆ ಮಾಡುವಂತೆ ಸಿಎಂ ಬೊಮ್ಮಾಯಿ ಅವರಿಗೆ ಒತ್ತಾಯಿಸಿರುವ ಆನಂದ್ ಸಿಂಗ್ ಆ. 15ರವರೆಗೆ ಗಡುವು ನೀಡಿದ್ದರು. ಒಂದು ವೇಳೆ ನಾಳೆಯೊಳಗೆ ಖಾತೆ ಬದಲಾವಣೆ ಮಾಡದಿದ್ದರೆ ರಾಜೀನಾಮೆ ಸುಳಿವು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ನಡೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
BIG NEWS: ಜೆಡಿಎಸ್ ಶಾಸಕ – ಬಿಜೆಪಿ ಸಂಸದರ ನಡುವೆ ಜಟಾಪಟಿ; ಏಕವಚನದಲ್ಲಿ ಬಾಯಿಗೆ ಬಂದಂತೆ ಬೈದಾಡಿಕೊಂಡ ಜನಪ್ರತಿನಿಧಿಗಳು
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನಾಳೆ ನೂತನ ಜಿಲ್ಲೆ ವಿಜಯನಗರದಲ್ಲಿ ಧ್ವಜಾರೋಹಣ ನೆರವೇರಿಸಲಿರುವ ಆನಂದ್ ಸಿಂಗ್, ಬಳಿಕ ಬೆಂಗಳೂರಿಗೆ ಆಗಮಿಸಲಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿಯಾಗಿ ರಾಜೀನಾಮೆ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.