ಲೈಂಗಿಕ ಆಸಕ್ತಿ ಯಾವಾಗ ಹೆಚ್ಚಾಗುತ್ತದೆ ಎಂಬುದಕ್ಕೆ ಸ್ಪಷ್ಟ ಉತ್ತರ ನೀಡುವುದು ಕಷ್ಟ. ಅದು ಪರಸ್ಪರ ಭಿನ್ನವಾಗಿರುತ್ತದೆ. ಆದ್ರೆ ಬೇಸಿಗೆಯಲ್ಲಿ ಸೂರ್ಯನ ಕಿರಣ ಚರ್ಮದ ಮೇಲೆ ಬಿದ್ದಾಗ ಲೈಂಗಿಕ ಬಯಕೆ ಹೆಚ್ಚಾಗುತ್ತದೆಯಂತೆ. ಇದನ್ನು ನಾವು ಹೇಳ್ತಿಲ್ಲ. ಇಸ್ರೇಲಿ ಅಧ್ಯಯನದಲ್ಲಿ ಬಹಿರಂಗವಾಗಿದೆ.
ಇಸ್ರೇಲಿ ಸಂಶೋಧಕರು ಬೇಸಿಗೆಯಲ್ಲಿ ಪ್ರೀತಿ ಹೆಚ್ಚಾಗುವ ಹಿಂದೆ ವೈಜ್ಞಾನಿಕ ಕಾರಣವನ್ನು ಕಂಡು ಹಿಡಿಯುವ ಪ್ರಯತ್ನ ನಡೆಸಿದ್ದಾರೆ. ಸೂರ್ಯನ ಕಿರಣಗಳು ಚರ್ಮಕ್ಕೆ ಸೋಕಿದಾಗ, ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆ ಎಂದು ಅಧ್ಯಯನದಲ್ಲಿ ಪತ್ತೆ ಮಾಡಲಾಗಿದೆ.
ಟೆಲ್ ಅವಿವ್ ವಿಶ್ವವಿದ್ಯಾನಿಲಯದ ತಂಡವೊಂದು ಇದ್ರ ಬಗ್ಗೆ ಅಧ್ಯಯನ ನಡೆದಿದೆ. ಡಿ ಎನ್ ಎ ಯನ್ನು ಸೂರ್ಯನ ಬೆಳಕಿನಿಂದ ಹಾನಿಯಾಗದಂತೆ ರಕ್ಷಿಸುವ ಚರ್ಮದ ಕೋಶಗಳಲ್ಲಿ ಇರುವ ಪ್ರೋಟೀನ್ ಮತ್ತು ಪಿ 53-ಹಾರ್ಮೋನ್, ಶಾರೀರಿಕ ಮತ್ತು ನಡವಳಿಕೆಯಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ. ಪ್ರಾಣಿಗಳಲ್ಲಿ ಲೈಂಗಿಕತೆ ಪ್ರಚೋದನೆ ಹೆಚ್ಚಾದಂತೆ ಮಾನವನಲ್ಲೂ ಪ್ರೀತಿ ಹೆಚ್ಚಾಗಲು ಇದು ಕಾರಣವಾಗುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಟೆಲ್ ಅವಿವ್ ವಿಶ್ವವಿದ್ಯಾನಿಲಯದ ಈ ತಂಡ ಚರ್ಮದ ಕ್ಯಾನ್ಸರ್ ಬಗ್ಗೆ ಅಧ್ಯಯನ ನಡೆಸುತ್ತದೆಯಂತೆ. ಆದ್ರೆ ಆಕಸ್ಮಿಕವಾಗಿ ಸೂರ್ಯನ ಕಿರಣಗಳು, ಪ್ರೋಟೀನ್ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಮತ್ತು ಲೈಂಗಿಕ ಬಯಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಪತ್ತೆ ಮಾಡಲು ಶುರು ಮಾಡಿದ್ದರಂತೆ. ಅನೇಕ ಪ್ರೋಟೀನ್ ದೇಹದಲ್ಲಿದ್ದು. ಸೂರ್ಯನ ಬೆಳಕಿಗೆ ದೇಹ ಒಡ್ಡಿಕೊಂಡ ನಂತರ ರಕ್ತದಲ್ಲಿ ಬದಲಾವಣೆಯಾಗುತ್ತದೆ. ಇದು ಭಾವೋದ್ವೇಗಕ್ಕೆ ಸಂಬಂಧಿಸಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.