ತೈವಾನ್ನ EV ದೈತ್ಯ ಕಂಪನಿ ಗೊಗೊರೊ ಭಾರತದ ರಸ್ತೆಗಿಳಿಯಲು ಸಜ್ಜಾಗಿದೆ. ನಾಳೆ ಗೊಗೊರೊ ಕಂಪನಿಯ ಎಲೆಕ್ಟ್ರಿಕ್ ವೆಹಿಕಲ್ ಭಾರತದಲ್ಲಿ ಬಿಡುಗಡೆಯಾಗಲಿದೆ. ನಾಳಿನ ಈವೆಂಟ್ ನಮ್ಮ ದೇಶದಲ್ಲಿ ನಡೆಯುತ್ತಿರುವ ಈ ಬ್ರ್ಯಾಂಡ್ನ ಚೊಚ್ಚಲ ಕಾರ್ಯಕ್ರಮ.
ಈಗಾಗ್ಲೇ ಗೊಗೊರೊ ತನ್ನ ಬ್ಯಾಟರಿ-ಸ್ವಾಪಿಂಗ್ ತಂತ್ರಜ್ಞಾನ ಮತ್ತು ಸ್ವಾಪ್ ಸ್ಟೇಷನ್ಗಳಿಗೆ ಪ್ರಸಿದ್ಧಿ ಪಡೆದಿದೆ. ತನ್ನ ಎಲೆಕ್ಟ್ರಿಕ್ ವಾಹನಗಳನ್ನು ಭಾರತಕ್ಕೆ ಪರಿಚಯಿಸ್ತಾ ಇರೋದು ವಿಶೇಷ. ಕುತೂಹಲಕಾರಿ ಅಂಶವೆಂದರೆ ಗೊಗೊರೊ, ಹೀರೋ ಮೋಟೋ ಕಾರ್ಪ್ನೊಂದಿಗೆ ಪಾಲುದಾರಿಕೆ ಹೊಂದಿದೆ.
ದೇಶಾದ್ಯಂತ ಸ್ವಾಪ್ ಸ್ಟೇಷನ್ಗಳನ್ನು ಸ್ಥಾಪಿಸಲು ಮತ್ತು ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಭಾರತೀಯ ಬೈಕ್ಮೇಕರ್, ಗೊಗೊರೊಗೆ ಸಹಕರಿಸಲಿದೆ. ಗೊಗೊರೊ ತನ್ನದೇ ಆದ EV ಕೊಡುಗೆಗಳನ್ನು ಸಹ ಇಲ್ಲಿ ಪ್ರಾರಂಭಿಸುತ್ತದೆ.
ತೈವಾನ್ ಮೂಲದ ಈ ಬ್ರ್ಯಾಂಡ್ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಬ್ಯಾಟರಿ-ಸ್ವಾಪಿಂಗ್ ನೆಟ್ವರ್ಕ್ ಹಂಚಿಕೆಯ ಉಪಕ್ರಮವೆಂದು ನಿರೀಕ್ಷಿಸಬಹುದು ಎಂದು ಕಂಪನಿ ಹೇಳಿದೆ. ಗೊಗೊರೊ ತನ್ನ ಚಮತ್ಕಾರಿ, ಆಧುನಿಕ ಎಲೆಕ್ಟ್ರಿಕ್ ಸ್ಕೂಟರ್ S1 ಅನ್ನು ಭಾರತಕ್ಕೆ ಆರಂಭದಲ್ಲಿ ಪರಿಚಯಿಸಬಹುದು. ಇದು 27Nm ಉತ್ಪಾದಿಸುವ 7.2kW ಹಬ್ ಮೋಟಾರ್ ಮತ್ತು 150km ವ್ಯಾಪ್ತಿಯನ್ನು ಹೊಂದಿದೆ. ಇದು ಭಾರತೀಯ ಮಾರುಕಟ್ಟೆಗೆ ಸೂಕ್ತವಾದ ಉತ್ಪನ್ನದಂತಿದೆ.
B2B ವಿಭಾಗದಲ್ಲಿ Viva ಇ-ಸ್ಕೂಟರ್ ಅನ್ನು ಪರಿಚಯಿಸುವ ಸಾಧ್ಯತೆ ಇದೆ. ಸುಂದರ ವಿನ್ಯಾಸದ ಈ ಇವಿ ಭಾರತದ ರಸ್ತೆಗಳಲ್ಲಿ ಇನ್ನಷ್ಟು ಆಕರ್ಷಕವಾಗಿ ಕಾಣಬಹುದು. ಇದು 85Nm ಉತ್ಪಾದಿಸುವ 3kW ಮೋಟಾರ್ ಹೊಂದಿದೆ ಮತ್ತು 85km ವ್ಯಾಪ್ತಿಯನ್ನು ಹೊಂದಿದೆ. ಗೊಗೊರೊ ಅವರು 2019 ರಲ್ಲಿ ‘ವಿವಾ’ ಹೆಸರನ್ನು ಟ್ರೇಡ್ಮಾರ್ಕ್ ಮಾಡಿಕೊಂಡಿತ್ತು. ಇಂದಿನ ಕಾರ್ಯಕ್ರಮದ ಬಗ್ಗೆ ವಾಹನ ಸವಾರರಲ್ಲಿ ಸಾಕಷ್ಟು ಕುತೂಹಲವಿದ್ದು, ಗೊಗೊರೊ ಕಂಪನಿಯ ವಿಶಿಷ್ಟ ಇವಿಗಳಿಗಾಗಿ ಮಾರುಕಟ್ಟೆಯೂ ಕಾತರದಿಂದಿದೆ.