ರಾಜಸ್ಥಾನದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕುಡುಕ ತಂದೆಯೊಬ್ಬ, ಅಪ್ಪ-ಮಗಳ ಪವಿತ್ರ ಸಂಬಂಧಕ್ಕೆ ಮುಜುಗರ ಉಂಟು ಮಾಡುವಂಥ ಕೆಲಸ ಮಾಡಿದ್ದಾನೆ. ಕುಡಿತದ ವ್ಯಸನಿಯಾಗಿದ್ದ ಆತ ಅದಕ್ಕಾಗಿ ಸಾವಿರಾರು ರೂಪಾಯಿ ಸಾಲ ಮಾಡಿಕೊಂಡಿದ್ದ. ಸಾಲದ ಹೊರೆ ಹೆಚ್ಚಾದಾಗ ತನ್ನ 4 ವರ್ಷದ ಪುಟ್ಟ ಮಗಳನ್ನೇ ಅಡವಿಟ್ಟಿದ್ದಾನೆ. ರಾಜಸ್ಥಾನದ ಜೈಪುರದಲ್ಲಿ ಈ ಕೃತ್ಯ ನಡೆದಿದೆ.
ಆತ ತನ್ನ 4 ವರ್ಷದ ಮಗಳು ಮತ್ತು 6 ವರ್ಷದ ಮಗಳ ಜೊತೆಗೆ ವಾಸಿಸುತ್ತಿದ್ದ. ಕುಡಿತಕ್ಕಾಗಿ ಮಾಡಿದ ಸಾಲ ತೀರಿಸಲು ತನ್ನ 4 ವರ್ಷದ ಮಗಳನ್ನು ಲೇವಾದೇವಿಗಾರನಿಗೆ ಒಪ್ಪಿಸಿದ. ಮಗುವನ್ನು ಪಡೆದ ವ್ಯಕ್ತಿ ಅವಳನ್ನು ಭಿಕ್ಷೆಗೆ ಕಳುಹಿಸುತ್ತಿದ್ದ. ಬಾಲಕಿ ಮತ್ತಾಕೆಯ ಸಹೋದರ ಇಬ್ಬರೂ ಮಕ್ಕಳು ಬೀದಿಯಲ್ಲಿ ತಿರುಗುತ್ತಿರುವುದು ಕಂಡುಬಂದಿದೆ.
ಕೋಟಾದ ರೈಲ್ವೇ ಕಾಲೋನಿಯಲ್ಲಿ ಮಕ್ಕಳಿಬ್ಬರೂ ತಿರುಗಾಡುತ್ತಿದ್ದಾಗ ಕೌನ್ಸಿಲರ್ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿ ಸದ್ಯ ಇಬ್ಬರಿಗೂ ಆಶ್ರಯ ನೀಡಿದೆ. ತಾಯಿ ಅಂಗವಿಕಲೆ, ತಂದೆ ಕುಡಿತದ ಚಟಕ್ಕೆ ಬಿದ್ದಿದ್ದಾನೆಂದು ಮಕ್ಕಳು ಮಾಹಿತಿ ನೀಡಿದ್ದಾರೆ.