ಹೊರಗಡೆ ಹೊರಟಾಗ ಬಾಯಾರಿದ್ರೆ, ಅಂಗಡಿಯಿಂದ ದುಡ್ಡು ಕೊಟ್ಟು ನೀರಿನ ಬಾಟಲಿ ಖರೀದಿಸುವುದು ಸಾಮಾನ್ಯ. ಬೆಂಗಳೂರಿನಂತಹ ನಗರಗಳಲ್ಲಿ 2ರೂ. 5ರೂ.ಗೆ ಕುಡಿಯುವ ನೀರು ದೊರಕುತ್ತದೆ. ಹೆಚ್ಚಿನ ಮಂದಿ ಇದನ್ನೇ ಬಳಸುತ್ತಾರೆ. ಇನ್ನೂ ಕೆಲವರು ಜಾಸ್ತಿ ಮೊತ್ತಕ್ಕೆ ನೀರು ಖರೀದಿಸಬಹುದು. ಆದರೆ, ಇಲ್ಲೊಬ್ಬ ಕುಡಿಯುವ ನೀರಿಗೆ ಮಾಡುವ ಖರ್ಚು ಕೇಳಿದ್ರೆ ಖಂಡಿತಾ ಶಾಕ್ ಆಗ್ತೀರಾ..!
ಹೌದು, ವ್ಯಕ್ತಿಯೊಬ್ಬ ಉನ್ನತ ಗುಣಮಟ್ಟದ ನೀರಿಗಾಗಿ ತಿಂಗಳಿಗೆ 2000 ಡಾಲರ್ (ಸುಮಾರು 1.5 ಲಕ್ಷ ರೂ.) ಖರ್ಚು ಮಾಡುತ್ತಾನಂತೆ. ಈ ಬಗ್ಗೆ ಟಿಕ್ಟಾಕ್ನಲ್ಲಿ ಮಾಹಿತಿ ನಿರುವ ರಿಯಾನ್ ಡಬ್ಸ್, ತನ್ನ ಮನೆಗೆ ನೇರವಾಗಿ ತಲುಪುವ ಕುಡಿಯುವ ನೀರಿಗಾಗಿ ಪ್ರತಿ ತಿಂಗಳು 1.5 ಲಕ್ಷ ರೂ. ಖರ್ಚು ಮಾಡುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ ಈತ ತನ್ನನ್ನು ತಾನು ವಾಟರ ಸ್ನೋಬ್ ಅಂತಾ ಬಣ್ಣಿಸಿದ್ದಾನೆ.
ರಯಾನ್ ವಿಒಎಸ್ಎಸ್ ಬ್ರ್ಯಾಂಡ್ ನ ನೀರನ್ನೇ ಖರೀದಿಸುತ್ತಾನಂತೆ. ಇದು ಈತನ ನೆಚ್ಚಿನ ಬ್ರ್ಯಾಂಡ್ ಆಗಿದೆ ಎಂಬುದಾಗಿ ತಿಳಿಸಿದ್ದಾನೆ. ಅಷ್ಟೇ ಅಲ್ಲ ನೀರಿನ ಬಾಟಲಿಗಳನ್ನು ತನ್ನ ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಿಕೊಳ್ಳುತ್ತಾನೆ. ಇದಕ್ಕೆಂದೇ ನಾಲ್ಕು ಫ್ರಿಡ್ಜ್ ಗಳನ್ನು ಖರೀದಿಸಿದ್ದಾನಂತೆ ಈ ಭೂಪ..! ಅಲ್ಲದೆ, ಟ್ಯಾಪ್ ನೀರನ್ನು ಕುಡಿಯಲು ಒಲ್ಲೆ ಎನ್ನುವ ರಯಾನ್ ಅಧಿಕ ಮೊತ್ತ ಕೊಟ್ಟು ವಿಒಎಸ್ಎಸ್ ಬ್ರ್ಯಾಂಡ್ ನ ನೀರನ್ನೇ ಖರೀದಿಸಿ ಕುಡಿಯುತ್ತಾನಂತೆ. ರಯಾನ್ ನ ಈ ಹೇಳಿಕೆಗೆ ನೆಟ್ಟಿಗರು ಮಾತ್ರ ಪ್ರಭಾವಿತರಾಗಿಲ್ಲ.