ಉರಿಯುತ್ತಿರುವ ಸ್ಟವ್ ಮೇಲೆ ಮಡದಿಯ ಮುಖ ಹಿಡಿದು ಆಕೆಯನ್ನು ಬರ್ಬರವಾಗಿ ಹತ್ಯೆಗೈಯ್ಯಲು ಕುಡುಕನೊಬ್ಬ ಮುಂದಾದ ಘಟನೆ ಹರಿಯಾಣಾದ ಫರೀದಾಬಾದ್ನಲ್ಲಿ ಜರುಗಿದೆ.
ಆರೋಪಿಯನ್ನು ಪಿಂಕು ಎಂದು ಗುರುತಿಸಲಾಗಿದ್ದು, ಈತ ತನ್ನ ಮಡದಿ ಕಲ್ಪನಾ ಜೊತೆಗೆ ಫರೀದಾಬಾದ್ನ ಇಟ್ಟಿಗೆ ಗೂಡೊಂದರಲ್ಲಿ ಕೆಲಸ ಮಾಡುತ್ತಿದ್ದ.
ಕುಡಿತದ ವಿಪರೀತ ಚಟ ಅಂಟಿಸಿಕೊಂಡಿದ್ದ ಪಿಂಕು, ತನ್ನನ್ನು ತಡೆಯಲು ಮುಂದಾದ ಕಲ್ಪನಾ ಜೊತೆಗೆ ಜಗಳವಾಡಿದ್ದಾನೆ. ಈ ವೇಳೆ ಇಬ್ಬರ ಜಗಳ ಕಚ್ಚಾಟಕ್ಕೆ ತಿರುಗಿದ್ದು, “ಕುಡಿತದ ಅಮಲಿನಲ್ಲಿ ಪಿಂಕು ತನ್ನ ಮಡದಿಯ ಮುಖವನ್ನು ಉರಿಯುತ್ತಿದ್ದ ಒಲೆಗೆ ಹಿಡಿದಿದ್ದಾನೆ” ಎಂದು ವಿಚಾರಣಾಧೀನ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇಲ್ಲಿದೆ ಈ ಹುಡುಗಿಯರ ʼಸೌಂದರ್ಯʼದ ಗುಟ್ಟು
ಈ ವೇಳೆ ಜೋರಾಗಿ ಕಿರುಚಿಕೊಂಡ ಕಲ್ಪನಾರನ್ನು ಅಕ್ಕಪಕ್ಕದ ಮಂದಿ ಓಡಿಬಂದು ರಕ್ಷಿಸಿ, ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಬಂಧುಗಳಿಗೆ ವಿಚಾರ ಮುಟ್ಟಿಸಿದ್ದಾರೆ.
ಕಲ್ಪನಾಗೆ ಸೂಕ್ತ ಚಿಕಿತ್ಸೆ ಕೊಡಿಸಲು ದೆಹಲಿಗೆ ಕಳುಹಿಸಲಾಗಿದೆ. ಐಸಿಯುನಲ್ಲಿರುವ ಕಲ್ಪನಾ ಸದ್ಯಕ್ಕೆ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.
ಸಂತ್ರಸ್ತೆಯ ದೂರನ್ನು ಆಧರಿಸಿ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸ್ ತಲೆ ತಪ್ಪಿಸಿಕೊಂಡಿರುವ ಪಿಂಕುನ ಶೋಧದಲ್ಲಿದ್ದಾರೆ.
ಪೊಲೀಸರಿಗೆ ದೂರು ಕೊಟ್ಟ ಕಲ್ಪನಾ ಸಹೋದರ, “ಐದು ವರ್ಷಗಳ ಹಿಂದೆ ಅವರಿಬ್ಬರೂ ಮದುವೆಯಾಗಿದ್ದಾರೆ. ಪಿಂಕು ತನಗೆ ದೈಹಿಕ ಹಿಂಸೆ ಕೊಡುತ್ತಿದ್ದಾನೆ ಎಂದು ನನ್ನ ಸಹೋದರಿ ಮೊದಲ ದಿನವೇ ದೂರಿದ ಕೂಡಲೇ ಆಕೆಗೆ ವಿಚ್ಛೇದನ ಕೊಡಿಸಬೇಕಿತ್ತು ಎಂದು ನನಗೆ ಅನಿಸುತ್ತದೆ” ಎಂದು ಸಂತ್ರಸ್ತೆಯ ಸಹೋದರ ತಿಳಿಸಿದ್ದಾರೆ.