ಗಾಜಿಯಾಬಾದ್: ಯುವಕರ ಗುಂಪೊಂದು ಚಲಿಸುತ್ತಿರುವ ಕಾರಿನ ಛಾವಣಿಯ ಮೇಲೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಸಂಬಂಧ ಗಾಜಿಯಾಬಾದ್ ಟ್ರಾಫಿಕ್ ಪೊಲೀಸರು ಕಾರು ಮಾಲೀಕರಿಗೆ 20,000 ರೂ. ದಂಡ ವಿಧಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಇಬ್ಬರು ಯುವಕರು ಕುಡಿದು ಚಲಿಸುತ್ತಿರುವ ಕಾರಿನ ಛಾವಣಿಯ ಮೇಲೆ ನೃತ್ಯ ಮಾಡುವುದನ್ನು ತೋರಿಸಿದೆ. ಇಬ್ಬರು ಯುವಕರು ಕಾರಿನ ಮೇಲೆ ಕುಳಿತಿದ್ದರೆ, ಇನ್ನಿಬ್ಬರು ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ.
ಘಟನೆಯ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಬಳಕೆದಾರರು, ಗಾಜಿಯಾಬಾದ್‌ನಲ್ಲಿ ಯುವಕರ ಗುಂಪೊಂದು ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ತಮ್ಮ ಕಾರಿನ ಛಾವಣಿಯ ಮೇಲೆ ನಿಂತು ಡ್ಯಾನ್ಸ್ ಮಾಡಿದ್ದಾರೆ. ಅವರು ಶೀಘ್ರದಲ್ಲೇ ಲಾಕಪ್‌ನಲ್ಲಿ ತಮ್ಮ ಟ್ಯೂನ್‌ಗಳಿಗೆ ನೃತ್ಯ ಮಾಡುತ್ತಾರೆ ಎಂದು ಭಾವಿಸುತ್ತೇವೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಟ್ವೀಟ್‌ನಲ್ಲಿ ಗಾಜಿಯಾಬಾದ್ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.
https://twitter.com/scribe_prashant/status/1510073869977395204?ref_src=twsrc%5Etfw%7Ctwcamp%5Etweetembed%7Ctwterm%5E1510073869977395204%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fvideo-ghaziabad-youth-seen-dancing-on-moving-cars-roof-rs-20000-challan-imposed-violating-traffic-rules-5315992%2F