ಹೆಚ್ಚಿನ ಜನರು ಕುಡಿದು ವಾಹನ ಚಲಾಯಿಸುತ್ತಿದ್ದರೆ, ಪೊಲೀಸರನ್ನು ತಪ್ಪಿಸುತ್ತಾ ವಾಹನ ಚಲಾಯಿಸುತ್ತಾರೆ. ಆದರೆ, ಅಮೆರಿಕಾದಲ್ಲಿ ಮಾತ್ರ ಮಹಿಳೆಯೊಬ್ಬಳು ಇದಕ್ಕೆ ತದ್ವಿರುದ್ಧವಾಗಿ ಮಾಡಿದ್ದಾಳೆ.
ಒಂದು ವಿಲಕ್ಷಣ ಘಟನೆಯಲ್ಲಿ, ಕುಡಿದ ಮತ್ತಿನಲ್ಲಿ ಚಾಲಕಿಯೊಬ್ಬಳು ಪೊಲೀಸ್ ಪೊಲೀಸ್ ಇಲಾಖೆಯ ಪ್ರಧಾನ ಕಚೇರಿಯ ಮೆಟ್ಟಿಲುಗಳ ಮೂಲಕ ತನ್ನ ವಾಹನವನ್ನು ಚಲಾಯಿಸಿದ್ದಾಳೆ. ಮೈನ್‌ನ ಪೋರ್ಟ್‌ಲ್ಯಾಂಡ್‌ನಲ್ಲಿ 26 ವರ್ಷದ ಮಹಿಳೆ ತನ್ನ ಕಾರನ್ನು ಪೊಲೀಸ್ ಇಲಾಖೆಯ ಪ್ರಧಾನ ಕಚೇರಿಯ ಮೆಟ್ಟಿಲುಗಳ ಮೂಲಕ ಓಡಿಸಲು ಪ್ರಯತ್ನಿಸಿದ್ದಾಳೆ.
ಕೂಡಲೇ ಏನಾಯ್ತು ಎಂದು ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಮಹಿಳೆ ತನ್ನನ್ನು ತಾನು ಸಮರ್ಥಿಸಿಕೊಂಡಿದ್ದು, ಜಿಪಿಎಸ್ ಅನ್ನು ದೂರಿದ್ದಾಳೆ. ತಾನು ಜಿಪಿಎಸ್ ಸೂಚನೆಯನ್ನು ಅನುಸರಿಸುತ್ತಿದ್ದೆ. ಆದರೆ, ಅದು ಕಟ್ಟಡಕ್ಕೆ ಕರೆದೊಯ್ಯಿತು ಎಂದು ಹೇಳಿದ್ದಾಳೆ. ಕೂಡಲೇ ಆಕೆಯನ್ನು ಪರೀಕ್ಷೆಗೊಳಪಡಿಸಿದಾಗ ಅತಿಯಾಗಿ ಆಲ್ಕೋಹಾಲ್ ಕುಡಿದಿದ್ದೇ ಈ ಅವಾಂತರಕ್ಕೆ ಕಾರಣ ಎಂಬುದನ್ನು ಪೊಲೀಸರು ಶೀಘ್ರದಲ್ಲೇ ಅರಿತುಕೊಂಡಿದ್ದಾರೆ.
ನಾವು ಅದೃಷ್ಟವಂತರು, ಅವಳು ಯಾರನ್ನೂ ಹೊಡೆಯಲಿಲ್ಲ. ಇದು ಕೇವಲ ಒಂದು ಸಣ್ಣ ಪ್ರಮಾಣದ ಆಸ್ತಿ ಹಾನಿಯೊಂದಿಗೆ ಕೊನೆಗೊಂಡಿತು ಎಂದು ಪೊಲೀಸ್ ಇಲಾಖೆ ಫೇಸ್ಬುಕ್ನಲ್ಲಿ ಹಂಚಿಕೊಂಡಿದೆ. ಅಲ್ಲದೆ ಮಹಿಳೆಯ ಹಾನಿಗೊಳಗಾದ ಕಾರಿನ ಚಿತ್ರಗಳನ್ನು ಹಂಚಿಕೊಳ್ಳುತ್ತಾ, ದಯವಿಟ್ಟು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ ಎಂದು ಪೊಲೀಸರು ನಾಗರಿಕರಿಗೆ ಒತ್ತಾಯಿಸಿದ್ದಾರೆ.