ಜೆಡಿಎಸ್ ಪಕ್ಷವನ್ನು ಜೆಡಿಎಫ್ ಎಂದು ಮರುನಾಮಕರಣ ಮಾಡಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, ಸಿದ್ದರಾಮಯ್ಯಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಮಗ ಶಾಸಕನಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಕುಟುಂಬದ ನಾಲ್ವರು ರಾಜಕಾರಣದಲ್ಲಿದ್ದಾರೆ. ಸಿದ್ದರಾಮಯ್ಯ ಪುತ್ರ ಅಕಾಲಿಕ ಮರಣಕ್ಕೀಡಾದರು. ಬಿಜೆಪಿ ಹಾಗೂ ಕಾಂಗ್ರೆಸ್ಸಿನವರು ಇದಕ್ಕೆ ಕಾನೂನು ಜಾರಿ ಮಾಡಲಿ. ತಮ್ಮ ಸಾಮರ್ಥ್ಯದಿಂದ ಸಂವಿಧಾನ ತಿದ್ದುಪಡಿ ಮಾಡಲಿ. ಕುಟುಂಬದಿಂದ ಇಷ್ಟೇ ಜನ ರಾಜಕಾರಣಕ್ಕೆ ಬರಬೇಕು ಎಂದು ನಿಯಮ ಮಾಡಲಿ ಎಂದು ಸವಾಲ್ ಎಸೆದರು.
ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಸಿದ್ದರಾಮಯ್ಯ ಆರೋಪಕ್ಕೂ ಇದೇ ವೇಳೆ ಟಾಂಗ್ ನೀಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ತಮ್ಮ ಬಾಯಿಗೆ ಸುಮ್ಮನೇ ಶ್ರಮ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಈ ರೀತಿಯ ಇಂದು ಸ್ಲೇಟ್ನ್ನು ಕುತ್ತಿಗೆಗೆ ಹಾಕಿಕೊಂಡು ಊರೆಲ್ಲ ಓಡಾಡಲಿ. ಸುಮ್ಮನೇ ಬಾಯಿ ಏಕೆ ನೋವು ಮಾಡಿಕೊಳ್ತೀರಿ..? 2018ರಿಂದಲೂ ಇದನ್ನೇ ಹೇಳುತ್ತಾ ಬರ್ತಿದ್ದೀರಿ. ಸಿದ್ದರಾಮಯ್ಯಗೆ ಇದು ತಿರುಗುಬಾಣವಾಗುತ್ತೆ . ಇದರ ಪರಿಣಾಮದಿಂದ 2023ರಲ್ಲಿ ಜೆಡಿಎಸ್ ಲಾಭ ಪಡೆಯುತ್ತೆ ಎಂದು ಭವಿಷ್ಯ ನುಡಿದರು.