alex Certify ಕುಟುಂಬಸ್ಥರ ಸಮ್ಮುಖದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಲಿಂಗಕಾಮಿ ಜೋಡಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಟುಂಬಸ್ಥರ ಸಮ್ಮುಖದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಲಿಂಗಕಾಮಿ ಜೋಡಿ..!

ಹೈದರಾಬಾದ್​ನ ಸಲಿಂಗಕಾಮಿ ಜೋಡಿ ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಅಧಿಕೃತವಾಗಿ ಕಾಲಿಟ್ಟಿದ್ದಾರೆ. ಈ ಖಾಸಗಿ ಕಾರ್ಯಕ್ರಮವು ಹೈದರಾಬಾದ್​​ನ ಹೊರವಲಯದಲ್ಲಿರುವ ರೆಸಾರ್ಟ್​ನಲ್ಲಿ ಶನಿವಾರ ನಡೆದಿದೆ.

31 ವರ್ಷದ ಸುಪ್ರಿಯೋ ಚಕ್ರವರ್ತಿ ಹಾಗೂ 34 ವರ್ಷದ ಅಭಯ್​ ಡಂಗ್​ ಪರಸ್ಪರ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ವಿವಾಹವಾದರು. ಇದು ಮಾತ್ರವಲ್ಲದೇ ಪಂಜಾಬ್​ ಹಾಗೂ ಬಂಗಾಳಿ ಸಂಪ್ರದಾಯದಂತೆಯೂ ವಿವಾಹ ನೆರವೇರಿಸಲಾಗಿದೆ. ಪ್ರಮುಖ ಹೋಟೆಲ್​ ಮ್ಯಾನೇಜ್​ಮೆಂಟ್​ ಇನ್​ಸ್ಟಿಟ್ಯೂಟ್​ನಲ್ಲಿ ಹಿರಿಯ ಅಧ್ಯಾಪಕರಾದ ಸುಪ್ರಿಯೋ ಕೊಲ್ಕತ್ತಾದವರಾಗಿದ್ದರೆ ಎಂಎನ್​ಸಿ ಉದ್ಯೋಗಿಯಾಗಿರುವ ಅಭಯ್​ ಮೂಲತಃ ದೆಹಲಿಯವರಾಗಿದ್ದಾರೆ. 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ ಶನಿವಾರ ಅಧಿಕೃತವಾಗಿ ಪತಿ ಹಾಗೂ ಪತಿಯಾಗಿದ್ದಾರೆ.

ಸಮಾರಂಭದಲ್ಲಿ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಕಿಗ್​ಶುಕ್​ನಾಗ್, ಇಂದು ನಾನು ಒಂದು ವಿಭಿನ್ನವಾದ ಸಂಜೆಯನ್ನು ಕಳೆದಿದ್ದೇನೆ. ಭಾರತವು ಹೇಗೆ ಬದಲಾಗುತ್ತಿದೆ ಎಂಬುದನ್ನು ಸಾಕ್ಷೀಕರಿಸಲು ಹೆಚ್ಚಿನ ಸಂಖ್ಯೆಯ ಸಂಬಂಧಿಗಳು ಹಾಗೂ ಸ್ನೇಹಿತರು ಈ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...